Sunday, April 20, 2025
Homeರಾಜ್ಯತುಂಗಭದ್ರಾ ನದಿ‌ಯಲ್ಲಿ ಅಕ್ರಮ‌ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ‌ ಎಸಿ ದಿಢೀರ್ ದಾಳಿ! ತಾಲೂಕು...

ತುಂಗಭದ್ರಾ ನದಿ‌ಯಲ್ಲಿ ಅಕ್ರಮ‌ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ‌ ಎಸಿ ದಿಢೀರ್ ದಾಳಿ! ತಾಲೂಕು ಅಧಿಕಾರಿಗಳಿಗೆ ತರಾಟೆ!

ಗದಗ: ಅಕ್ರಮ ಮರಳು ದಂಧೆಕೋರರಿಗೆ ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗದಗ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಬಗೆದು ಅಕ್ರಮ ಮರಳು ಲೂಟಿ ಮಾಡುತ್ತಿದ್ದ ದಂಧೆಕೋರರಿಗೆ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನೇತೃತ್ವದ ತಂಡ ಇಂದು ಬೆಳಿಗ್ಗೆ ದಿಢೀರ್ ದಾಳಿ ನಡೆಸಿ, ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳಿಗೂ ಡಿಸಿ ತರಾಟೆ ತೆಗೆದುಕೊಂಡಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದ ಬಳಿಯ ತುಂಗಭದ್ರಾ ನದಿ ಪಾತ್ರದಲ್ಲಿ, ಕಳೆದ ಒಂದು ತಿಂಗಳಿಂದ ನದಿಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ಇದ್ರೂ ತಾಲೂಕಾಡಳಿತ ಮೌನವಹಿಸಿದೆ. ದಂಧೆಕೋರರು ಮುಂಡರಗಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಶಾಮೀಲಾಗಿದ್ದಾರೆ‌ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಸ್ವತಃ ಗದಗ ಡಿಸಿ ಸಿ ಎನ್ ಶ್ರೀಧರ್ ಹಾಗೂ ಎಸಿ ಗಂಗಪ್ಪ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ‌ನಡೆಸಿದ್ದಾರೆ.

ನಸುಕಿನ ಜಾವ 4-30 ರ ಸುಮಾರಿಗೆ ಡಿಸಿ ಹಾಗೂ ಎಸಿ ಸ್ವತಃ ನೀರಿಗಿಳಿದಿದ್ದಾರೆ. ಖಾಸಗಿ ವಾಹನದಲ್ಲಿ ತೆರಳಿ ಮರಳು ಅಡ್ಡೆಗಳ ಮೇಲೆ ದಾಳಿ‌ ನಡೆಸಿ ದಂಧೆಕೋರರಿಗೆ‌ ಡಿಸಿ ಶಾಕ್ ನೀಡಿದ್ದಾರೆ.

ಈ ವೇಳೆ, ಸುಮಾರು 20 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ‌ ಮರಳುಗಳ್ಳರು ನದಿ ಮಧ್ಯದಲ್ಲಿ ಅಕ್ರಮವಾಗಿ‌ ಮರಳು ತುಂಬುತ್ತಿದ್ದರು.‌ ಅಧಿಕಾರಿಗಳನ್ನ ಕಂಡ ತಕ್ಷಣ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬೆನ್ನು ಹತ್ತಿದ ಅಧಿಕಾರಿಗಳಿಗೆ ಎರೆಡು‌ ಟ್ರ್ಯಾಕ್ಟರ್ ಹಾಗೂ ಇಬ್ಬರು ಚಾಲಕರು,‌ ಮೊಬೈಲ್ ಸೇರಿದಂತೆ ಹಲವು‌ ಕಡೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದಲ್ಲಿದ್ದ ಅಕ್ರಮ‌ ಮರಳನ್ನ ವಶಪಡಿಸಿಕೊಂಡಿದ್ದಾರೆ.

ಇನ್ನು ಡಿಸಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮುಂಡರಗಿ ತಹಶಿಲ್ದಾರ ಪಿ.ಎಸ್.ಯರ್ರಿಸ್ವಾಮಿ ಸ್ಥಳಕ್ಕೆ ತಡವಾಗಿ ದೌಡಾಯಿಸಿದ್ದಕ್ಕೆ ಡಿಸಿ ಅವರು, ಮುಂಡರಗಿ ತಹಶಿಲ್ದಾರರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ಕಂದಾಯ ಇಲಾಖೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments