ಬಾಗಲಕೋಟೆ: ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ರೆ ಚಂದ್ರಶೇಖರ ಸ್ವಾಮೀಜಿಯನ್ನ ಅರೆಸ್ಟ ಮಾಡಲಿ ನೋಡೋಣ? ಅಂತಾ ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಸವಾಲ್ ಹಾಕಿದ್ದಾರೆ.
ಇತ್ತೀಚೆಗೆ ವಕ್ಫ್ ಬೋರ್ಡ್ ನೋಟಿಸ್ ಕೊಡುವ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಅಂದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಚಂದ್ರಶೇಖರ ಸ್ವಾಮಿಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹೇಳಿಕೆ ಬೆನ್ನಲ್ಲೇ ಹಲವು ರಾಜಕೀಯ ಮುಖಂಡರು ಒಳಗೊಂಡಂತೆ ಅನೇಕರು ಹೇಳಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮುಂದುವರೆದ ಸರ್ಕಾರ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ ಐ ಆರ್ ದಾಖಲಿಸಿದೆ. ಇದೇ ವಿಚಾರಕ್ಕೆ ಕೆಂಡಾಮಂಡಲವಾಗಿರೋ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಂದ್ರಶೇಖರ ಸ್ವಾಮೀಜಿ ಬೆಂಬಲಕ್ಕೆ ನಿಂತಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೆದುರು ಮಾತನಾಡಿರೋ ಮುತಾಲಿಕ್, ಸ್ವಾಮೀಜಿ ಮೇಲೆ ಹಾಕಿರೋ ಎಫ್ ಐಆರ್ ಅರ್ಥಹೀನವಾಗಿದ್ದು,ಅವರ ಹೇಳಿಕೆಯಲ್ಲಿ ತಪ್ಪಿಲ್ಲ, ಪ್ರಚೋದನೆಯೂ ಇಲ್ಲ.ಆದರೆ ನಿಮ್ಮ ಮುಲ್ಲಾ, ಮೌಲ್ವಿಗಳು ನಮ್ಮ ಹಿಂದು ಧರ್ಮ ಹಾಗೂ ಭಾರತದ ಬಗ್ಗೆ ಏನು ಹೇಳಿದ್ದಾರೆ ಒಮ್ಮೆ ಕಣ್ತೆರೆದು ನೋಡಿ.ಅವರ ಮೇಲೆ ಎಷ್ಟು ಎಫ್ ಐಆರ್ ಆಗಿವೆ? ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದಾಗ ಆರೆಸ್ಟ್ ಮಾಡಲು ಒಂದು ವಾರ ತೆಗೆದುಕೊಂಡ್ರಲ್ಲ? ಕಾಂಗ್ರೆಸ್ ಸರ್ಕಾರ ಕೂಡಲೇ ಸ್ವಾಮೀಜಿ ವಿರುದ್ಧ ಎಫ್ ಐಆರ್ ಹಿಂಪಡೆಯಬೇಕು.ಸ್ವಾಮೀಜಿ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಸರಿಯಾಗಿಯೇ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಮುಸ್ಲಿಮರು ಸಂವಿಧಾನವನ್ನ ಧಿಕ್ಕರಿಸುತ್ತಿದ್ದಾರೆ.ಸುಪ್ರೀಂ ಕೋರ್ಟ್ ನ್ನೂ ಸಹ ಧಿಕ್ಕರಿಸುತ್ತಿದ್ದಾರೆ.ಈ ದೇಶವನ್ನ ನುಂಗಿಹಾಕಲು ಇಸ್ಲಾಂಮೀಕ ಶಕ್ತಿ ಬೆಳೆಸುತ್ತಿದ್ದಾರೆ.ಅವರನ್ನ ಪ್ರೀಜ್ ಮಾಡಲು ಸ್ವಾಮೀಜಿ ವಿರುದ್ಧ ಕೇಸ್ ಹಾಕ್ತೀರಿ.ಇದ್ದಿದ್ದು ಇದ್ದಂಗೆ ಹೇಳಿದ್ರೆ ಎಫ್ ಐಆರ್ ಆಗುತ್ತಾ? ತಾಕತ್ತಿದ್ರೆ ಸ್ವಾಮಿಜಿಯನ್ನ ಬಂಧಿಸಿ ನೋಡಿ ಎಂದು ಸವಾಲ್ ಹಾಕಿದ್ದಾರೆ.