ಬೆಂಗಳೂರು: ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ (government schools) ಮಕ್ಕಳಿಂದ ಕಸ ಗುಡಿಸುವ ಮತ್ತು ಶೌಚಾಲಯಗಳನ್ನು ಶುಚಿಗೊಳಿಸುವ ಕೆಲಸ ಮಾಡಿಸಿದ ಪ್ರಕರಣಗಳು ವರದಿಯಾಗಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಅಂಥಹ ಘಟನೆಗಳು ನಡೆಯುತ್ತಿಲ್ಲ. ಹಾಗೇನಾದರೂ ಅಂಥಹ ಘಟನೆಗಳು ಕಂಡುಬಂದರೆ, ಅಂಥಹ ಶಾಲಾ ಆಡಳಿತ ಮಂಡಳಿ ವಿರುದ್ಧ ತಕ್ಷಣವೇ ಕ್ರಮ ಜರಗಿಸಲಾಗುವದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ,ಸರ್ಕಾರಿ ಶಾಲೆಗಳಲ್ಲಿ ಸದ್ಯಕ್ಕೆ ಅಂಥ ಘಟನೆಗಳು ಈಗ ನಡೆಯುತ್ತಿಲ್ಲ, ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರೀತಿಯ ಶುಚಿಯ ಕೆಲಸಗಳಿಂತಾನೆ, ಮೆಂಟೇನನ್ಸ್ ಗೆ ಅಂತ ಶಾಲೆಗಳಿಗೆ ನೀಡುತ್ತಿದ್ದ ಹಣದ ಮೊತ್ತವನ್ನು ದ್ವಿಗುಣಗೊಳಿಸಿದ್ದಾರೆ, ಅದನ್ನ ಶಾಲಾ ಆಡಳಿತ ಮಂಡಳಿ ಸರಿಯಾಗಿ ಸದ್ವಿನಿಯೋಗಿಸಬೇಕು.
ಅಲ್ಲದೆ ಮಕ್ಕಳಿಂದ ಕ್ಲೀನ್ ಮಾಡಿಸುವ ಪ್ರಕರಣ ಗಮನಕ್ಕೆ ಬಂದರೆ ಮರುಕ್ಷಣವೇ ಕ್ರಮ ಜರುಗಿಸಲಾಗುವುದು ಮತ್ತು ಅದನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಲಾ ಸುಧಾರಣಾ ಸಮಿತಿಗಳಿಗೆ ವಹಿಸಲಾಗಿದೆ ಎಂದರು.