ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ ಏಳು ಮಂದಿ ಆರೋಪಿಗಳಿಗೆ ಇಂದು (ಶುಕ್ರವಾರ)ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಆರ್.ನಾಗರಾಜು,ಎಂ.ಲಕ್ಷ್ಮಣ, ಅನು ಕುಮಾರ್, ಜಗದೀಶ್ ಮತ್ತ ಪ್ರದೋಷ್ ರಾವ್ ಗೂ ಜಾಮೀನು ನೀಡಲಾಗಿದೆ.
ಇದಕ್ಕೂ ಮೊದಲು ದರ್ಶನ್ ಅವರಿಗೆ ಹೈಕೋರ್ಟ್ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಬೆನ್ನು ನೋವಿನ ಸರ್ಜರಿ ಕಾರಣ ನೀಡಿ ಮಧ್ಯಂತರ ಜಾಮೀನು ನೀಡಲಾಗಿತ್ತು. ಈ ಮಧ್ಯಂತರ ಜಾಮೀನು ಅವಧಿ ಡಿಸೆಂಬರ್ 11 ರಂದು ಮುಕ್ತಾಯವಾಗಿತ್ತು. ಇದೀಗ ಕಳೆದ 07 ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.