27
ಬೆಂಗಳೂರಿನಲ್ಲಿ ಮೂಲಭೂತ ಕಾಮಗಾರಿ ನಡೆಸಲು ಕರ್ನಾಟಕ ಸರ್ಕಾರ ವಿಶ್ವಬ್ಯಾಂಕ್‌ನಿಂದ ₹3,500 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ನೀರು ಸರಬರಾಜು, ಮಳೆನೀರು ಚರಂಡಿ, ಒಳಚರಂಡಿ ವ್ಯವಸ್ಥೆ ಸುಧಾರಿಸಲು ಮತ್ತು ಪ್ರವಾಹ ನಿರ್ವಹಣೆಗೆ ಸಾಲ ಕೇಳಲಾಗುತ್ತಿದೆ.
ಇದೇ ವೇಳೆ, ಬಿಬಿಎಂಪಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ್ದು, ಭ್ರಷ್ಟಾಚಾರದಲ್ಲಿ ತೊಡಗಿ ₹1,500 ಕೋಟಿ ದುರ್ಬಳಕೆಯಾಗಿದೆ ಎಂದು RTI ಕಾರ್ಯಕರ್ತರಾದ ಎಸ್.ಅಮರೇಶ್ ಮತ್ತು ಬಿ.ಎಚ್.ವೀರೇಶ್ ಆರೋಪಿಸಿದ್ದಾರೆ.