7
ಗದಗ: ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬೂದಪ್ಪ ಅಂಗಡಿ ಹಾಗೂ ಮಾದ್ಯಮಿಕ ಶಾಲಾ ನೌಕರರ ಸಂಘದ ಗದಗ ಶಹರ ಘಟಕದ ಅಧ್ಯಕ್ಷರಾದ ಬಿ.ಕೆ. ನಿಂಬನಗೌಡರ ಅವರನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಹಿರಿಯ ಸದಸ್ಯರಾದ ರವಿ (ರಾಜೇಶ) ಕೊಣ್ಣೂರ ಹಾಗೂ ಗೋರಕ್ಷಣಾಥ ಪ್ರೌಢಶಾಲೆ, ಹುಬ್ಬಳ್ಳಿ ಶಾಲೆಯ ಮುಖ್ಯೊಪಾಧ್ಯಾಯರಾದ ಕೃಷ್ಣಾಜಿ ಎನ್. ಕಾಟೇನವರ ಅವರು ಉಪಸ್ಥಿತರಿದ್ದರು.