ಗದಗ : ಸಾರಿಗೆ ಸಂಸ್ಥೆಯ ಬಸ್ ಗೆ ಮೊಟ್ಟೆ, ಸಗಣಿ, ಕಲುಷಿತ ಬಣ್ಣ ಎರಚಿದ ಹಿನ್ನಲೆ ಬಸ್ ಕಿಟಕಿ ಕ್ಲೋಸ್ ಮಾಡಿ ಕೂತಿದ್ದ ವಿದ್ಯಾರ್ಥಿಗಳಿಗೆ ಉಸಿರಾಟ ತೊಂದರೆಯಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾ ಬಳಿ ನಡೆದಿದೆ.
ಸರ್ಕಾರಿ ಬಸ್ ಗೆ ಬಣ್ಣ, ಸಗಣಿ ಎರಚಿ ಪುಂಡಾಟ ಮೆರೆದ ಯುವಕರ ತಂಡ ಮುಂದಾಗಿತ್ತು. ಬಣ್ಣ ಬೀಳಬಾರದು ಎಂದು ಬಸ್ ಕಿಟಕಿ ಕ್ಲೋಸ್ ಮಾಡಿದ್ದ ಸ್ಟೂಡೆಂಟ್ ಕಿಟಕಿ ಕ್ಲೋಸ್ ಆಗಿದ್ದಕ್ಕೆ ಉಸಿರಾಟದ ತೊಂದರೆಯಿಂದ ಬಳಲಿದ್ದಾರೆ. ಉಸಿರಾಟದ ತೊಂದರೆಯಿಂದ ಹಲವು ವಿದ್ಯಾರ್ಥಿಗಳು ಎದೆ ನೋವು ಅಂತಾ ಕಣ್ಣೀರು ಹಾಕಿ ಅಸ್ವಸ್ಥಗೊಂಡಿದ್ದಾರೆ. ಅಲ್ಲದೇ ವಾಂತಿ ಸಹ ಮಾಡಿಕೊಂಡಿದ್ದಾರೆ. ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು 8-9 ನೇ ತರಗತಿಯ ಪರೀಕ್ಷೆ ಬರೆಯಲು ಹೊರಟ್ಟಿದ್ದ ವಿದ್ಯಾರ್ಥಿಗಳು ಸಹ ಈ ಬಸ್ ನಲ್ಲಿ ಇದ್ದರು. ಇಂದು ಗಣಿತ ಹಾಗೂ ವಿಜ್ಞಾನ ಪರೀಕ್ಷೆ ನಿಗದಿಯಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆರು ವಿದ್ಯಾರ್ಥಿನಿಯರ ಪೈಕಿ ನಾಲ್ವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಇಬ್ಬರಿಗೆ ಲಕ್ಷ್ಮೇಶ್ವರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಮಿಕಲ್ ಬಣ್ಣ, ಮೊಟ್ಟೆ, ಗೊಬ್ಬರ ಮಿಶ್ರಿತ ಬಣ್ಣ ಎರೆಚಿದ ಹಿನ್ನಲೆ ನಡೆದ ದುರ್ಘಟನೆಗೆ, ಬಸ್ ನಲ್ಲಿದ್ದ ಕಂಡಕ್ಟರ್ ಹಾಗೂ ಡ್ರೈವರ್ ಈ ರೀತಿ ಮಾಡಬಾರೆಂದು ಯುವಕರಿಗೆ ತಿಳಿ ಹೇಳಿದ್ರು ಹೊಡೆಯಲು ಮುಂದಾದರು ಅಂತ ಸಾರಿಗೆ ಇಲಾಖೆ ಸಿಬ್ಬಂದಿ ಆರೋಪಿಸಿದ್ದಾರೆ. ವಿಧ್ಯಾರ್ಥಿಗಳ ಪಾಲಕರು ಕಿಡಗೇಡಿಗಳನ್ನು ಬಂಧಿಸಬೇಕು ಜೊತೆಗೆ ಅಂತವರಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ದಾರೆ. ಇನ್ನು ಘಟನೆ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.