Sunday, April 20, 2025
Homeಸುತ್ತಾ-ಮುತ್ತಾಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಕುಟುಂಬಗಳು ಮತ್ತೆ ತಮ್ಮ ಮೂಲ ಧರ್ಮಕ್ಕೆ!

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಕುಟುಂಬಗಳು ಮತ್ತೆ ತಮ್ಮ ಮೂಲ ಧರ್ಮಕ್ಕೆ!

ಆರ್ಥಿಕ ಸಮಸ್ಯೆಯ ಹಿನ್ನಲೆ ಎರೆಡು ವರ್ಷಗಳ ಹಿಂದೆ ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ನಾಲ್ಕು ಭೋವಿ ಕುಟುಂಬಗಳು ಮತ್ತೇ ತಮ್ಮ ಮೂಲ ಹಿಂದೂ ಧರ್ಮಕ್ಕೆ ವಾಪಾಸ್ಸಾಗಿದ್ದಾರೆ. ಕುಟುಂಬ ಸದಸ್ಯರ ಆಶಯದಂತೆ ಹಿಂದೂ ಜಾಗರಣ ವೇದಿಕೆಯು ಗದಗ ಜಿಲ್ಲೆ ಲಕ್ಷ್ಮೇಶ್ವರ ಸಮಿಪದ ಬಸಾಪೂರ ಗ್ರಾಮದಲ್ಲಿ ಗವಿಮಠದ ಪೂಜ್ಯರಾದ ಡಾ. ಕುಮಾರ ಮಹಾರಾಜರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಕುಟುಂಬಸ್ಥರನ್ನ ಮೂಲ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು

ಈ ವೇಳೆ ಮಾತನಾಡಿದ ಘರ್ ವಾಪ್ಸಿಯಾದ ಕುಟುಂಬಸ್ಥರು, ಕ್ರಿಶ್ಚಿಯನ್ ಧರ್ಮ ಸ್ವೀಕರಿಸಲು ನನಗೆ ಸಂತೋಷವಿರಲಿಲ್ಲ. ಮತಾಂತರವು ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಸಹಾಯ ಮಾಡಲಿಲ್ಲ. ಇದೀಗ ಮತ್ತೇ ನಮ್ಮ ಧರ್ಮಕ್ಕೆ ಮರಳಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾನು ಮತ್ತು ಸಂಘಟನೆ ಸಂಯೋಜಕಿ ಮುಕ್ತಾಬಾಯಿ ಉತ್ತಲೆಕರ ಅವರು ಬಸಾಪೂರ ಗ್ರಾಮದವರನ್ನು ಸಂಪರ್ಕಿಸಿ ಮತಾಂತರಗೊಂಡವರ ಬಗ್ಗೆ ಮಾಹಿತಿ ತೆಗೆದುಕೊಂಡು ತಪಸ್ವಿ ಡಾ.ಕುಮಾರ್ ಮಹಾರಾಜರ ಮೂಲಕ ಮತಾಂತರಗೊಂಡವರನ್ನು ಮನವೊಲಿಸಿ, ಹಿಂದೂ ಧರ್ಮದ ವೈಶಿಷ್ಟ್ಯಗಳನ್ನು ತಿಳಿಸುವ ಮೂಲಕ ಮತಾಂತರಗೊಂಡ ಕುಟುಂಬಸ್ಥರನ್ನ ಮತ್ತೇ ಮೂಲ ಧರ್ಮಕ್ಕೆ ಮರಳುವಂತೆ ಮಾಡಿದ್ದೇವೆ ಎಂದು ಹಿಂದೂ ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಮಹೇಶ ಗುಜ್ಜರಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments