ಲಕ್ಕುಂಡಿ, ಏಪ್ರಿಲ್ 19:
ನಿನ್ನೆ ಸಂಜೆ ಲಕ್ಕುಂಡಿ ಹಾಗೂ ಅದರ ಸುತ್ತಮುತ್ತ ಭಾರಿ ಮಳೆ ಮತ್ತು ಬಿರುಗಾಳಿ ಸುರಿದ ಪರಿಣಾಮ, ತೋಟದಲ್ಲಿ ಕಟಾವಿಗೆ ಬಂದಿದ್ದ ಸೇವಂತಿಗೆ ಹೂವು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಘಟನೆ ವೇಳೆ ತಗಡಿನ ಶೆಡ್ಡುಗಳ ಮೇಲೆ ಬಿದ್ದ ಗಾಳಿಗೆ ನಾಲ್ವರು ಜನರಿಗೆ ಗಾಯಗಳಾಗಿವೆ.
ಜಂದೀಪೀರ ದರ್ಗಾ ಹತ್ತಿರವಿರುವ ತೋಟದಲ್ಲಿ ಕಟಾವಿಗೆ ಬಂದಿದ್ದ ಸುಮಾರು ಹತ್ತು ಎಕರೆ ಸೇವಂತಿಗೆ ಹೂವುಗಳಲ್ಲಿ ಒಂದು ಎಕರೆ ಗಲಾಟೆ ಹೂವುಗಳು ನೆಲಕಚ್ಚಿದವು. ಗಾಳಿಯ ತೀವ್ರತೆಗೆ ತೋಟದ ಮನೆಯ ತಗಡಿನ ಶೆಡ್ಡುಗಳು ಹಾರಿ ಹೋಗಿದ್ದು, ಮನೆಯೊಳಗಿದ್ದ ರೈತ ಕುಟುಂಬದ ಸದಸ್ಯರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸೋಮಣ್ಣ ನೂಕಾಪೂರ, ಮಲ್ಲವ್ವ ನೂಕಾಪೂರ, ಹಾಗೂ ಭಾಗ್ಯ ನೂಕಾಪೂರ ಎಂಬುವಾಗಿ ಗುರುತಿಸಲಾಗಿದ್ದು, ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಇದೇ ವೇಳೆ, ದನಕರುಗಳ ಶೆಡ್ಡು, ಬೇವಿನ ಮರ, ಮಾವಿನ ಮರ ಹಾಗೂ ಲಿಂಬಿ ಹಣ್ಣು ಮರಗಳು ಬಿರುಗಾಳಿಗೆ ಬಿದ್ದು ನಷ್ಟ ಸಂಭವಿಸಿದೆ. ಪೈಪುಗಳು ಒಂದು ವ್ಯಕ್ತಿಯ ಮೇಲೆ ಬಿದ್ದ ಪರಿಣಾಮ ಕೈಗೆ ಗಾಯವಾಗಿದ್ದು, ಸುಮಾರು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಗತವರ್ಷದ ಮಳೆಗಾಲದಲ್ಲಿಯೂ ಹೂವು ಬೆಳೆ ಹಾನಿಗೊಂಡಿದ್ದು, ತೆಂಗಿನ ಮರಗಳಿಗೆ ಸಿಡಿಲು ಬಡಿದ ಘಟನೆಗಳು ನಡೆದಿರುವುದರಿಂದ, ರೈತರು ನಿರಾಶೆಗೆ ಒಳಗಾಗಿದ್ದಾರೆ. ಈ ಕುರಿತು ರೈತ ಹೇಮಣ್ಣ ಬೇಲೇರಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
