Saturday, April 19, 2025
Homeರಾಜ್ಯಕೆ.ಎಚ್.ಪಾಟೀಲರನ್ನ ಸಿಎಂ ಮಾಡುವ ಮಾತು ಆಡಿದ್ದರು; ಕೃಷ್ಣಾ ನಿಧನಕ್ಕೆ ಹೆಚ್.ಕೆ.ಪಾಟೀಲ‌ ಸಂತಾಪ!

ಕೆ.ಎಚ್.ಪಾಟೀಲರನ್ನ ಸಿಎಂ ಮಾಡುವ ಮಾತು ಆಡಿದ್ದರು; ಕೃಷ್ಣಾ ನಿಧನಕ್ಕೆ ಹೆಚ್.ಕೆ.ಪಾಟೀಲ‌ ಸಂತಾಪ!

ಬೆಳಗಾವಿ: ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನಕ್ಕೆ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನೀರಾವರಿಗೆ ಕೃಷ್ಣ ಅವರ ಕೊಡುಗೆ ಅಪಾರವಾಗಿತ್ತು.ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದರು.ಕೆಬಿಜೆಎನ್ಎಲ್ ಕರ್ನಾಟಕ ನೀರಾವರಿ ನಿಗಮ ಸ್ಥಾಪನೆ ಕಾರ್ಯಕತೃವಾಗಿದ್ದರು. ಹಾಗೆಯೇ ಕಾವೇರಿ ನೀರಾವರಿ ನಿಗಮಕ್ಕೂ ಅವರ ಕೊಡುಗೆ ಅಪಾರವಾಗಿತ್ತು.ರಾಜ್ಯದಲ್ಲಿ ನೀರಾವರಿಗೆ ವಿಶೇಷ ಚಾಲನೆ ನೀಡಿದವರು ಕೃಷ್ಣಾ‌‌ ಅವರದು ಎಂದು ಹೇಳಿದ್ದಾರೆ.

ಅಲ್ಲದೇ ಕೃಷ್ಣ ಅವರ ಜೊತೆಗಿನ ಸಂಬಂಧದ ಕುರಿತು ಮಾತನಾಡಿರುವ ಹೆಚ್ಕೆ, ನನ್ನದು ಅವರದ್ದು ಎರಡನೇ ಜನನೆರಷನ್ ಸಂಬಂಧ, ನನ್ನ ತಂದೆ ಜೊತೆಗೆ ಕೃಷ್ಣಾ ಅವರು ನಿಕಟ ಸಂಬಂಧವನ್ನ ಹೊಂದಿದ್ದರು.ಕೆ ಎಚ್ ಪಾಟೀಲ್ ಅವರನ್ನ ಸಿಎಂ ಮಾಡುವ ಮಾತನ್ನು ಕೃಷ್ಣಾ ಆಡಿದ್ದರು. ಜೊತೆಗೆ ನನ್ನನ್ನು ನನ್ನ ಸಹೋದರನನ್ನು ಸ್ವಂತ ಮಕ್ಕಳಂತೆ ಕಂಡವರು ಎಂದು ಹೇಳಿದ್ದಾರೆ.

ರಾಜ್ಯದ ಕಾಂಗ್ರೆಸ್ ಪಕ್ಷ ಬೆಳೆಸಲು ನಮಗೆ ಸೂಚನೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಜನಾದೇಶ 1999 ರಲ್ಲಿ ಬಂದಾಗ, ನಾವು‌ ಹೆಚ್ಚಿನ ಶಾಸಕರು ಮೆರವಣಿಗೆ ಮಾಡಿ ಕೃಷ್ಣ ಅವರು ಸಿಎಂ ಆಗಬೇಕೆಂದು ಒತ್ತಾಯ ಮಾಡಿದ್ದೇವು.ಅವರನ್ನು‌ ಅವಿರೋಧವಾಗಿ ಸಿಎಂ ಮಾಡಲಾಗಿತ್ತು.
ಸಚಿವ ಸಂಪುಟ ರಚನೆ ಮಾಡೋವಾಗ ನಮ್ಮ ಜೊತೆ ಮಾತನಾಡಿ, ಯಾವ ಖಾತೆ ಬೇಕೆಂದು ಕೇಳಿದಾಗ, ಗ್ರಾಮೀಣಾಭಿವೃದ್ಧಿ ಖಾತೆ ಬೇಕೆಂದು ಕೇಳಿದ್ದೆ
ಅವರೂ ಸಹ ಅದಕ್ಕೆ ಒಪ್ಪಿದ್ದರು.

ನಂತರ ಎಸ್ ಎಂ‌ ಕೃಷ್ಣ ನನಗೆ ಕರೆ ಮಾಡಿ,‌ನೀವು ಗ್ರಾಮೀಣಾಭಿವೃದ್ಧಿ ನಿರೀಕ್ಷೆ ಮಾಡಿದ್ದಿರಿ, ಆದರೆ ನನ್ನ ಸಹಪಾಠಿಯೊಬ್ಬರು ಗ್ರಾಮೀಣಾಭಿವೃದ್ಧಿ ಖಾತೆ ಬೇಡಿದ್ದಾರೆ,‌‌ಎಂದು‌ ಹೇಳಿದಾಗ ನೀವು ಕೊಟ್ಟ ಖಾತೆ ನಿಭಾಯಿಸುವೆ ಎಂದು ಹೇಳಿದ್ದೆ.ಆಗ ನನಗೆ ನೀರಾವರಿ ಖಾತೆ ಕೊಟ್ಟರು. ಆ ಖಾತೆಯಲ್ಲಿ ನನಗೆ ಅನುಭವವಿರಲಿಲ್ಲ. ಉತ್ತರ‌ ಕರ್ನಾಟಕ ಭಾಗದ ನೀರಾವರಿ ಸಮಸ್ಯೆ ಬಗ್ಗೆ ಮಾತ್ರ ಮಾಹಿತಿ ಇತ್ತು.ಹೀಗೆ ನೀರಾವರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಯಿತು.

37 ಪ್ರತಿಶತ ಹಣ ನೀರಾವರಿಗೆ ಕೃಷ್ಣ ಮೀಸಲಾಗಿಟ್ಟಿದ್ದರು. ಶಿಸ್ತಿಗೆ ಭದ್ದತೆಗೆ ಮಾದರಿಯಾಗಿದ್ದರು.

ಆದರೆ ಇಂದು ದೊಡ್ಡ ವ್ಯಕ್ತಿತ್ವವನ್ನೇ ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ‌ಕೋರುತ್ತೇವೆ. ಅಲ್ಲದೇ ಸದನದಲ್ಲಿ ಕೃಷ್ಣ ಅವರ ನಿಧನಕ್ಕೆ ಶ್ರದ್ದಾಂಜಲಿ ಅರ್ಪಿಸಲಾಗುತ್ತದೆ.

ನಾಳೆ ಅವರ ಅಂತ್ಯಕ್ರಿಯೆ ಇದ್ದು, ಅಲ್ಲಿಗೆ ಹೋಗುವವರಿಗೆ ಅನಕೂಲವಾಗಬೇಕೆಂಬ ಕಾರಣದಿಂದ ನಾಳೆ ಸದನವನ್ನ ನಡೆಸಲಾಗುವದಿಲ್ಲ. ಶಾಲಾ‌ ಕಾಲೇಜುಗಳಿಗೆ ರಜೆ ನೀಡುವ ಕುರಿತು ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments