ಗದಗ: ನಿಧಿ ಹುಡುಕಿಕೊಡುವುದಾಗಿ ಹೇಳಿ ಜನರನ್ನು ನಂಬಿಸಿ, ಹಣ ಪಡೆದುಕೊಂಡು ಮೋಸ ಮಾಡಿ ಪರಾರಿಯಾಗಿದ್ದ ಹಜರತ್ಮೋಸ ಮಾಡಿ ಪರಾರಿಯಾಗಿದ್ದ ಹಜರತ್ ಮೌಲ್ವಿ ಎಂಬುವವನ್ನು ಉತ್ತರಖಂಡದ ಕಾಶಿಪುರದಿಂದ ಬಂಧಿಸಿ ಕರೆತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದ ಬಷೀರಾ ಬಾನು ಎಂಬುವರಿಗೆ ಹಜರತ್ ಮೌಲ್ವಿ ನಿಧಿ ಆಸೆ ತೋರಿಸಿ ಅವರಿಂದ ಹಂತ ಹಂತವಾಗಿ 22 ಲಕ್ಷ ರೂ. ಪಡೆದು ವಂಚಿಸಿದ್ದನು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಫೆ. 12ರಂದು ಪ್ರಕರಣ ದಾಖಲಾಗಿತ್ತು.
ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಹಜರತ್ ಮೌಲ್ವಿ ಚತುರ ನಡೆಗಳು ಗೋಚರಿಸಿವೆ. ಅವುಗಳನ್ನು ಒಂದೊಂದಾಗಿ ಭೇದಿಸುತ್ತಾ ಹೋದ ಗದಗ ಪೊಲೀಸರು ಅಂತಿಮವಾಗಿ ಕಾಶಿಪುರದಿಂದ ಹಜರತ್ ಮೌಲ್ವಿಯನ್ನು ಬಂಧಿಸಿ ಕರೆತಂದಿದ್ದಾರೆ.
ಪ್ರಕರಣದ ಹಿನ್ನಲೆ
ಧಾರವಾಡ ನಿವಾಸಿ ಬಷೀರಾ ಬಾನು ತನಗೆ ನಿಧಿಧಾರವಾಡದ ಬಷೀರಾ ಬಾನು ಎಂಬುವರಿಗೆ ಹಜರತ್ ಮೌಲ್ವಿ ನಿಧಿ ಆಸೆ ತೋರಿಸಿ ಅವರಿಂದ ಹಂತ ಹಂತವಾಗಿ 22 ಲಕ್ಷ ರೂ. ಪಡೆದು ವಂಚಿಸಿದ್ದನು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಫೆ. 12ರಂದು ಪ್ರಕರಣ ದಾಖಲಾಗಿತ್ತು.
ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಹಜರತ್ ಮೌಲ್ವಿ ಚತುರ ನಡೆಗಳು ಗೋಚರಿಸಿವೆ. ಅವುಗಳನ್ನು ಒಂದೊಂದಾಗಿ ಭೇದಿಸುತ್ತಾ ಹೋದ ಗದಗ ಪೊಲೀಸರು ಅಂತಿಮವಾಗಿ ಕಾಶಿಪುರದಿಂದ ಹಜರತ್ ಮೌಲ್ವಿಯನ್ನು ಬಂಧಿಸಿ ಕರೆತಂದಿದ್ದಾರೆ.
ದೂರು ನೀಡಿದ್ದ ಬಷೀರಾ.
ಧಾರವಾಡ ನಿವಾಸಿ ಬಷೀರಾ ಬಾನು ತನಗೆ ನಿಧಿ ಆಸೆ ತೋರಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ 2022ರ ಸೆಪ್ಟೆಂಬರ್‌ನಲ್ಲಿ ದೂರು ನೀಡಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಮುಂದುವರಿದಿರಲಿಲ್ಲ. ಈ ವೇಳೆ, ಸರ್ಕಾರಕ್ಕೆ ಸೇರಬೇಕಿದ್ದ ನಿಧಿ ಕಂಡವರ ಪಾಲಾಗಿದೆ. ತನಿಖೆ ನಡೆಸಿ ಎಂದು ಫೆ.12ರಂದು ಮತ್ತೊಂದು ದೂರು ದಾಖಲಾಗಿದೆ. ಈ ವೇಳೆ ದೂರುದಾರರು, ಹಂಡೆಯಲ್ಲಿ ಚಿನ್ನ ಇರುವ ವಿಡಿಯೊವನ್ನು ಪೊಲೀಸರಿಗೆ ಸಾಕ್ಷ್ಯವಾಗಿ ನೀಡಿದ್ದರು. ಬಳಿಕ, ಮತ್ತೊಮ್ಮೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಆರಂಭಿಸಿದರು. ಎಲ್ಲ ಮಾಹಿತಿ ಕಲೆಹಾಕಿ, ತನಿಖೆ ಮುಂದುವರಿದಾಗ ಪೊಲೀಸರು ಅಂತಿಮವಾಗಿ ಹೋಗಿ ನಿಂತಿದ್ದು ಉತ್ತರಾಖಂಡದ ಹಜರತ್ ಮೌಲ್ವಿ ಎಂಬ ಚಾಣಾಕ್ಷ ವಂಚಕನ ಮನೆಮುಂದೆ. ಅವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ.ಶಾದಿ ಡಾಟ್ ಕಾಮ್‌ನಲ್ಲಿ ಪರಿಚಯ
ಹಜರತ್ ಮೌಲ್ವಿ ಮತ್ತು ಬಷೀರಾ ಬಾನು ಇಬ್ಬರಿಗೂ ಹತ್ತು ವರ್ಷಗಳ ಹಿಂದೆ ಶಾದಿ ಡಾಟ್ ಕಾಮ್‌ನಲ್ಲಿ ಪರಿಚಯವಾಗಿತ್ತು. ಹಜರತ್ ಮೌಲ್ವಿ ತನಗೆ ಅಲೋಪಥಿ, ಮಾಟಾ-ಮಂತ್ರ ಹಾಗೂ ನಿಧಿ ಪತ್ತೆಹಚ್ಚುವ ಪರಿಣಿತಿ ಇದೆ ಎಂದು ಬಷೀರಾಳನ್ನು ನಂಬಿಸಿದ್ದ. ಈ ವಿಷಯವನ್ನು ಬಷೀರಾ ತನ್ನ ಸ್ನೇಹಿತ ಇಕ್ಸಾಲ್ ಬಳಿ ಹಂಚಿಕೊಂಡಿದ್ದಳು.ಗದಗ ತಾಲೂಕಿನ ಇಟ್ಬಾಲ್‌ಗೆ ಗೂಳಪ್ಪ ಪರಿಚಯ. ಗೂಳಪ್ಪನಿಗೆ ಲಕ್ಕುಂಡಿಯ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪ ಸ್ನೇಹಿತರು. ಹೀಗೆ ಸಂಬಂಧಗಳ ಸರಪಳಿ ಮೂಲಕ ಹಜರತ್ ಮೌಲ್ವಿ ನಿಧಿಯ ನಾಟಕ ಕಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಪ್ಪು ಮೆಣಸು ಎರಚಿ ನಿಧಿ ಜಾಗ ಗುರುತಿಸಿದ್ದ ಚಾಲಾಕಿ.
2022ರ ಸೆಪ್ಟೆಂಬರ್‌ನಲ್ಲಿ ಹಜರತ್ ಮೌಲ್ವಿ ಲಕ್ಕುಂಡಿಗೆ ಬಂದು ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ಕಪ್ಪು ಮೆಣಸು ಹಾಗೂ ಕೆಲವು ವಸ್ತುಗಳನ್ನು ಎಸೆದು ‘ಇಲ್ಲೇ ನಿಧಿ ಇದೆ’ ಎಂದು ಜಾಗ ಗುರುತಿಸಿ, ಒಂದು ತಿಂಗಳ ನಂತರ ಬರುವುದಾಗಿ ಹೇಳಿ ಹೋಗಿಲ್ಲ. ಬಳಿಕ ವಂಚನೆಗೆ ಸಂಚು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದನು.
ಗದಗ ನಗರದ ಮಹೇಂದ್ರಕರ ಸರ್ಕಲ್ ಬಳಿ ಇರುವ ಸ್ಟೀಲ್ ಅಂಗಡಿಯಲ್ಲಿ 6,800 ರೂ. ಕೊಟ್ಟು ಹಳೆಯ ಹಂಡೆ ಖರೀದಿಸಿದ್ದ. ಅದಕ್ಕೆ ಬಟ್ಟೆ ಸುತ್ತಿ, ಪೂಜೆ ಸಾಮಾನು ಎಂದು ಹೇಳಿ ಜುಬೇರ್ ಮೂಲಕ ಲಕ್ಕುಂಡಿಗೆ ತೆಗೆದುಕೊಂಡು ಹೋಗಿದ್ದ. ಇದಕ್ಕಿಂತ ಕುತೂಹಲಕರವಾಗಿ, ಮಂಜುನಾಥ ರೆಸಿಡೆನ್ಸಿ ಸಮೀಪದ ಅಂಗಡಿಯಲ್ಲಿ ₹80 ನೀಡಿ 80 ಚಾಕೊಲೇಟ್ ಕಾಯಿನ್ಸ್ ಖರೀದಿಸಿ, ಯಾರಿಗೂ ಗೊತ್ತಾಗದಂತೆ ಜಮೀನಿನಲ್ಲಿ ಮುಂಚಿತವಾಗಿ ಹೂತಿಟ್ಟಿದ್ದನು.ನಂತರ ವಿಡಿಯೊ ಚಿತ್ರೀಕರಣ ಮಾಡಿಸಿಕೊಂಡು, ಬಿಂದಿಗೆಯನ್ನು ಹೊರತೆಗೆದು ‘ನಿಮ್ಮ ಪೂರ್ವಜರ ನಿಧಿ ನನಗೆ ದಕ್ಕದು. ಆದರೆ ಹಣ ಕೊಟ್ಟರೆ ಈ ಬಿಂದಿಗೆ ನಿಮ್ಮದು’ ಎಂದು ಸಣ್ಣಬಸಪ್ಪ, ದೊಡ್ಡಬಸಪ್ಪ ಅವರನ್ನು ನಂಬಿಸಿದ್ದಾನೆ. ಆದರೆ, ಅವರ ಬಳಿ ಮೌಲ್ವಿ ಕೇಳಿದಷ್ಟು ಹಣ ಇರಲಿಲ್ಲವಾದ್ದರಿಂದ, ಇದು ಯಾರಿಗೂ ದಕ್ಕದು ಎಂದು ಹೇಳಿ ನಿಧಿ ಮಣ್ಣಾಗಲಿ ಎಂದು ಹಂಡೆಯನ್ನು ಒದ್ದು ಹೋಗಿದ್ದನು.
ವೃದ್ಧ ಬಿಜ್ಜು, ನೋಯ್ದಾದ ಮರಿಯಂಳಿಗೂ ವಂಚನೆ
ಹಜರತ್ ಮೌಲ್ವಿ ತಮಿಳುನಾಡಿನ ಗುಡೂರಿನ ಬಿಜ್ಜು ಎಂಬ ವ್ಯಕ್ತಿಯ ಮಗನ ಆರೋಗ್ಯ ಸರಿಪಡಿಸುವುದಾಗಿ ಹೇಳಿ ₹1 ಲಕ್ಷ ಪಡೆದು ಮೋಸ ಮಾಡಿರುತ್ತಾನೆ. ಅದೇರೀತಿ, ದೆಹಲಿಯ ನೋಯ್ದಾದ ಮರಿಯಂಳಿಗೂ ಮೌಲ್ವಿ ಮೋಸ ಮಾಡಿರುತ್ತಾನೆ. ಹೀಗೆ ಹಜರತ್ ಮೌಲ್ವಿ ಜನರ ದುರ್ಬಲತೆ, ಅಸಹಾಯಕತೆಯನ್ನು ದಾಳವಾಗಿ ಬಳಸಿಕೊಂಡು ಎಲ್ಲರನ್ನೂ ತನ್ನ ಸಂಚಿನ ಜಾಲದೊಳಕ್ಕೆ ಸಿಲುಕಿಸಿದ್ದ. ನಿಧಿಯ ಕತೆಗೆ ಅವರಿಗೆ ಗೊತ್ತಿಲ್ಲದಂತೆ ಚಾಣಾಕ್ಷತನದಿಂದ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
