ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಹರಿಣಿ ಅಮರಸೂರ್ಯ ಅವರನ್ನು ಪ್ರಧಾನಿಯಾಗಿ ಮರು ನೇಮಕ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಅಧ್ಯಕ್ಷ ದಿಸ್ಸಾನಾಯಕೆ ನೇತೃತ್ವದ ಎಡರಂಗವು 225 ಸದಸ್ಯರ ಸದನದಲ್ಲಿ 159 ಸ್ಥಾನಗಳನ್ನ ಗೆದ್ದಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಹೊಸ ಸಚಿವ ಸಂಪುಟವನ್ನ ನೇಮಿಸಲಾಯಿತು. ಹರಿಣಿಗೆ ಪ್ರಧಾನಿಯಾಗುವ ಅವಕಾಶ ನೀಡಲಾಯಿತು. ಹಿರಿಯ ನಾಯಕಿ ವಿಜಿತಾ ಹೆರಾತ್ ಅವರನ್ನು ವಿದೇಶಾಂಗ ಸಚಿವರಾಗಿ ಮರು ನೇಮಕ ಮಾಡಲಾಗಿದೆ. ಜೆವಿಪಿ ನಾಯಕ ಕೆ.ಡಿ.ಲಲಕಂಠ ಅವರಿಗೆ ಕೃಷಿ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ. ದಿಸ್ಸಾನಾಯಕೆ ಅವರು ರಕ್ಷಣಾ ಮತ್ತು ಹಣಕಾಸು ಮುಂತಾದ ಪ್ರಮುಖ ಖಾತೆಗಳನ್ನ ಉಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.