Home » News » ರಸ್ತೆಯ ಹಂಪ್ಸ್ (ರೋಡ್ ಬ್ರೇಕ್ಸ್) ಗಳಿಗೆ ಬಣ್ಣ ಹಚ್ಚಿದ ಹರದಗಟ್ಟಿ ಯುವಕರು…!

ರಸ್ತೆಯ ಹಂಪ್ಸ್ (ರೋಡ್ ಬ್ರೇಕ್ಸ್) ಗಳಿಗೆ ಬಣ್ಣ ಹಚ್ಚಿದ ಹರದಗಟ್ಟಿ ಯುವಕರು…!

by CityXPress
0 comments

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ ಹರದಗಟ್ಟಿ ಗ್ರಾಮದ ರಸ್ತೆಗೆ ವಾಹನ ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ಗಳನ್ನು ಹಾಕಿದ್ದರು ಆದರೆ ರಾತ್ರಿ ವೇಳೆಯಲ್ಲಿ ಸವಾರರಿಗೆ ಸರಿಯಾಗಿ ಕಾಣದೆ , ಅನೇಕ ಬಾರಿ ಅಪಘಾತ ಸಂಭವಿಸಿದನ್ನು ಅರಿತು, ಸುಗಮವಾಗಿ ಸಂಚರಿಸಲು ತೊಂದರೆಯಾಗಿದ್ದರಿಂದ ಗ್ರಾಮದ ಯುವಕರೇ ಸೇರಿ ಶ್ರಮಾದಾನದ ಮೂಲಕ ರಸ್ತೆಯ ಹಂಪ್ಸ್ ಗಳಿಗೆ ತಮ್ಮದೇ ಕರ್ಚಿನಲ್ಲಿ ಬಿಳಿ ಬಣ್ಣ ತಂದು ಹಚ್ಚಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಘಟನೆ ನಡೆದಿದೆ.

ವರದಿ : ಪರಮೇಶ ಎಸ್ ಲಮಾಣಿ

ಲಕ್ಷ್ಮೇಶ್ವರದಿಂದ – ಹರದಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಾಕಿದ ರೋಡ್ ಬ್ರೇಕ್ ( ಹಂಪ್ಸ್) ಗಳು ನಾಮಕಿವಾಸ್ತೆ ಆಗಿವೆ ಬಣ್ಣಗಳು ಹೋಗಿವೆ, ರಾತ್ರಿ ವೇಳೆ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಂಪ್ಸ್ ಗಳು ಕಾಣದೆ ಆಟೋ ರಿಕ್ಷಾ, ಬೈಕು ಮತ್ತಿತರ ವಾಹನಗಳ ಪಲ್ಟಿಯಾಗಿ ಹಲವು ಜನರು ನೋವು ಅನುಭವಿಸಿದ್ದರು. ಈ ರಸ್ತೆಯಲ್ಲಿನ ಸಂಚಾರ ಪಟ್ಟಣಕ್ಕೆ ಸಮೀಪವಾದ್ದರಿಂದ ದಿನಂಪ್ರತಿ ನೂರಾರು ವಾಹನಗಳ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವು. ಹಲವಾರು ತಿರುವು ಇರುವದರಿಂದ, ಅಪಘಾತ ಆಗದಂತೆ ರಸ್ತೆಗೆ ಶಾಶ್ವತವಾದ ಕಾಮಗಾರಿ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಸಾರ್ವಜನಿಕರು ಒತ್ತಾಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಎಂದು ಅರಿತ ಊರಿನ ಯುವಕರು ತಮ್ಮ ಸ್ವಂತ ಖರ್ಚಿನಿಂದ ಬಣ್ಣಗಳು ತಂದು ತಾವೇ ಖುದ್ದಾಗಿ ರಸ್ತೆಯ ಹೊಂಡಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ಬಣ್ಣ ಹೆಚ್ಚಿ ಸದ್ಯಕ್ಕೆ ವಾಹನಗಳು ಸುಗಮವಾಗಿ ಓಡಾಡಲು ಅನುಕೂಲ ಮಾಡುವುದರ ಮೂಲಕ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದಿದ್ದಾರೆ.

ಸಂಬಂಧಿಸಿದ ಇಲಾಖೆ ಇನ್ನಾದರೂ ಅತೀ ಅಗತ್ಯ ಇರುವ ರಸ್ತೆಗೆ ಶಾಶ್ವತ ಪರಿಹಾರಕ್ಕೆ ಅನುದಾನ ಒದಗಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

banner

ಸಂದರ್ಭದಲ್ಲಿ ಜಗದೀಶ ಲಮಾಣಿ, ರೋಹನ ಲಮಾಣಿ, ಬಸವರಾಜ ಲಮಾಣಿ, ವಿನೋದ ಲಮಾಣಿ, ಸಾಯಿನಾಥ ನಾಯಕ, ಮುತ್ತು ಲಮಾಣಿ, ಶಿವಕುಮಾರ ತಳವಾರ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb