ಗದಗ: ಕೇಂದ್ರದ ಅನುದಾನದಿಂದ ಮಾತ್ರವೇ ಕಾಂಗ್ರೆಸ್ ಸರ್ಕಾರ ಇವತ್ತು ಚೇತರಿಸಿಕೊಂಡಿದ್ದು, ಪಕ್ಷದ ವೈಯಕ್ತಿಕ ಸಾಮರ್ಥ್ಯವಿಲ್ಲದೆ ಇರುವುದನ್ನು ಗದಗ ಸಂಸದ ರಮೇಶ್ ಜಿಗಜಿಣಗಿ ತೀಕ್ಷ್ಣವಾಗಿ ಟೀಕಿಸಿದರು. “ಕಾಂಗ್ರೆಸ್ ಕಥೆ ಮುಗಿದಿದೆ. ಅದು ಬದುಕಿದ್ದು ಕೇಂದ್ರ ಸರ್ಕಾರದ ಹಣದಿಂದ. ತಮ್ಮದೇ ಸಾಮರ್ಥ್ಯದಿಂದ ಏನು ಸಾಧಿಸಿಲ್ಲ,” ಎಂದು ಅವರು ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಈಗ ನಡೆಯುತ್ತಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವನ್ನೇ ನೀಡಿದೆ. ನಿಮ್ಮ ಬಳಿ ತಾಕತ್ತು ಇದ್ರೆ ಯೋಜನೆ ಕೊಡಿ, ಸರ್ಕಾರದ ಧನವನ್ನು ಜನರಿಗೆ ಭಿಕ್ಷೆಯಂತೆ ಹಂಚುವುದು ಸರಿಯಲ್ಲ. ಇದು ನಮ್ಮ ರಾಜ್ಯದ ಅಭಿಮಾನ ಹಾಗೂ ಗೌರವಕ್ಕೆ ಅಪಮಾನ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಭವಿಷ್ಯ ಬಗ್ಗೆಯೂ ಮಾತು..
“ನಾನು ಭವಿಷ್ಯ ಹೇಳುವವನಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಈ ಸರ್ಕಾರ ಐದು ವರ್ಷ ಪೂರ್ಣಗೊಳ್ಳುವುದು ಅನುಮಾನಾಸ್ಪದ. ದಸರಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಚಾಲನೆ ನೀಡಿಲ್ಲ ಎಂಬ ಆರ್.ಅಶೋಕ ಹೇಳಿಕೆಯನ್ನೂ ಗಮನಿಸಿದ್ದೇನೆ. ಈ ಬಗ್ಗೆ ನಾಳೆ ಆರ್.ಅಶೋಕ ಅವರನ್ನೇ ಕೇಳುತ್ತೇನೆ. ಇವು ಸರ್ಕಾರದ ಅಸ್ಥಿರತೆಯ ಸಂಕೇತಗಳು,” ಎಂದು ಜಿಗಜಿಣಗಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಶಾಸಕರ ಕೆಲವು ಬಹಿರಂಗ ಹೇಳಿಕೆಗಳು ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸೂರ್ಜಿವಾಲ ಅವರ ತಾಕೀತು ಬಂದಿರುವುದಾಗಿ ಜಿಗಜಿಣಗಿ ತಿಳಿಸಿದರು. “ಇದಕ್ಕೆ ಅರ್ಥ ನೀವೇ ಊಹೆ ಮಾಡಿಕೊಳ್ಳಿ. ಅವರ ಹಂಗ್ ಯಾಕ್ ಮಾತಾಡಿದ್ರು ಅಂತ ನನಗೆ ಹೇಳುವ ಅಗತ್ಯವಿಲ್ಲ,” ಎಂದು ವ್ಯಂಗ್ಯಮಾಡಿದರು.
ಬಿಜೆಪಿ ಆಂತರಿಕ ರಾಜಕೀಯದ ಬಗ್ಗೆ ಸ್ಪಷ್ಟನೆ:
ರಾಜ್ಯಾಧ್ಯಕ್ಷ ಬದಲಾವಣೆಯ ಬಗ್ಗೆ ಕೇಳಿದಾಗ ಜಿಗಜಿಣಗಿ ಸ್ಪಷ್ಟವಾಗಿ ಹೇಳಿದ್ದು ಹೀಗೆ: ಬಿಜೆಪಿ ದೇಶದ ಪಾರ್ಟಿ, ರಿಜಿನಲ್ ಪಾರ್ಟಿ ಅಲ್ಲ, ಪಕ್ಷದಲ್ಲಿ ಏನ್ನು ತೀರ್ಮಾನ ಆಗುತ್ತೇ ನಾವು ಒಪ್ಪಿಕೊಳ್ಳ ಬೇಕು ಅದು ನಮ್ಮ ಧರ್ಮ.ಯಡಿಯೂರಪ್ಪ ಹಾಗೂ ಅವರ ಮಗ ಹಂಗ್ ಮಾಡ್ಯಾರ ಹಿಂಗ್ ಮಾಡ್ಯಾರ ಅನ್ನೋದು ನಮ್ಮ ಪ್ರಶ್ನೆ ಅಲ್ಲ. ಪ್ರಶ್ನೆ ಮಾಡೋದು ನಮ್ಮ ಕೆಲಸ ಅಲ್ಲ.. ನಾಯಕರು ನಿರ್ಣಯ ಮಾಡ್ತಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಕ್ಕಿಂತ ನಾನು ಹಿರಿಯ ಮನುಷ್ಯ.ಯಡಿಯೂರಪ್ಪ ಅವರನ್ನ ಜೊತೆಗೆ ರಾಜಕಾರಣ ಮಾಡಿದೇನೆ. ಆದರೆ ನಾವು ಇದನ್ನು ಹೇಳಲು ಬರೋದಿಲ್ಲ.
ಪಕ್ಷದ ನಿರ್ಣಯ ಮಾಡುತ್ತೇ ಅದಕ್ಕೆ ಗೌರವ ದಿಂದ ಇರಬೇಕು. ನಮ್ಮ ಧರ್ಮ ನಾವು ಇರುತ್ತೇವೆ. ನಾನು ಹಿರಿಯನಲ್ಲ, ನಾನು ಪಕ್ಷ ಕಾರ್ಯಕರ್ತ. ದೇಶದ ಪಾರ್ಟಿ, ನಾನು ಕರ್ನಾಟಕದಲ್ಲಿ ಹಿರಿಯರು ಇರಬಹುದು. ದೇಶದಲ್ಲಿ ಹಿರಿಯರು ಅಲ್ಲ.ಪಕ್ಷದ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ, ವಿಜಯೇಂದ್ರ ಮುಂದುವರೆದ್ರು ನನ್ನಗೆ ಸಂತೋಷವಿದೆ ಎಂದು ಅವರು, ವಿ.ಸೋಮಣ್ಣ ಅವರು ನಾನು ಆಗೋದಿಲ್ಲ ಅಂತಾ ಹೇಳಿದ್ದಾರೆ. ನಮಗೆ ಎಲ್ಲಾ ವಿಚಾರ ಗೊತ್ತಿದ್ರೂ ಬಹಿರಂಗವಾಗಿ ಹೇಳಕ್ಕಾಗಲ್ಲ ಎಂದು ರಮೇಶ ಜಿಗಜಿಣಗಿ ಹೇಳಿದರು.
ಇನ್ನು ಶಾಸಕ ಯತ್ನಾಳ ಬಗ್ಗೆ ಕೇಳಿದ ತಕ್ಷಣ ಗರಂ ಆದ ರಮೇಶ ಜಿಗಜಿಣಗಿ, ಯತ್ನಾಳ ಬಗ್ಗೆ ನನ್ನಗೆ ಕೇಳಬೇಡಿ. “ಯತ್ನಾಳ್ ಬಗ್ಗೆ ನನ್ನೆದುರಿಗೆ ಕೇಳಬೇಡಿ. ಬೇರೆ ವಿಷಯ ಕೇಳಿ,” ಎಂದು ಸ್ಪಷ್ಟವಾಗಿ ಬೇಸರ ವ್ಯಕ್ತಪಡಿಸಿದರು.ಈ ವೇಳೆ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಇನ್ನಿತರರು ಇದ್ದರು.