ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ‘ಗೃಹಲಕ್ಷ್ಮಿ’ ಹಣ ಯಾವ ರೀತಿ ನೆರವು ಆಗಿದೆ ಅನ್ನೋದು ನಿಮಗೆಲ್ಲಾ ತಿಳಿದ ವಿಚಾರ. ರಾಜ್ಯದ ನಾನಾ ಭಾಗಗಳಲ್ಲಿ, ಗೃಹಲಲಕ್ಷ್ಮೀ ಹಣದಿಂದ, ಮನೆಗೆ ಫ್ರಿಜ್ ತೆಗೆದುಕೊಂಡಿದ್ದು,, ಗ್ರಾಮದಲ್ಲಿ ದೇವಸ್ಥಾನವೊಂದರ ನೂತನ ರಥ ನಿರ್ಮಾಣ ಹಾಗೂ ಅತ್ತೆ ಸೊಸೆ ಕೂಡಿ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿದ್ದ, ಹೀಗೆ ಅದೆಷ್ಟೋ ಕಾರ್ಯಗಳು ಗೃಹಲಕ್ಷ್ಮೀ ಹಣದಿಂದ ನಡೆದಿವೆ.

ಇದರ ಬೆನ್ನಲ್ಲೇ ಗೃಹಲಕ್ಷ್ಮೀ ಹಣದ ನೆರವಿನಿಂದ ಕರ್ನಾಟಕ-ಮಹಾರಾಷ್ಟ್ರದ ಗಡಿ ಅಂಚಿನ ಚಡಚಣ ತಾಲ್ಲೂಕಿನ ಶಿರಾಡೋಣ ಗ್ರಾಮದಲ್ಲಿ ಮಹಿಳೆಯೊಬ್ಬರು ಮನೆ ಕಟ್ಟಿಕೊಂಡಿದ್ದಾರೆ. ಗೃಹಿಣಿ ನೀಲಾಬಾಯಿ ಗಂಗಣ್ಣ ಪಾಂಡ್ರೆ ತಮಗೆ ಬಂದ ಗೃಹಲಕ್ಷ್ಮಿ ಹಣ ₹30 ಸಾವಿರದೊಂದಿಗೆ ಇನ್ನಷ್ಟು ಹಣ ಹೊಂದಿಸಿಕೊಂಡು ₹1 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಮನೆಗೆ ‘ಗೃಹಲಕ್ಷ್ಮಿ ನಿಲಯ’ ಎಂದು ನಾಮಕರಣ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ವನ್ನು ಅಂಟಿಸಿ ‘ಸಿದ್ದರಾಮಯ್ಯ ಕೃಪೆ’ ಎಂದು ಬರೆಸಿರುವದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.