ಲಕ್ಷ್ಮೇಶ್ವರ: ಎಥೆನಾಲ್ ಕಂಪನಿಗಳು ರೈತರಿಗೆ ಅನೇಕ ರೀತಿಯಲ್ಲಿ ಪ್ರಯೋಜನ ನೀಡುತ್ತವೆ, ಮುಖ್ಯವಾಗಿ ಮೆಕ್ಕೆಜೋಳ, ಕಬ್ಬು, ಜೋಳದಂತಹ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತವೆ, ಇದರಿಂದ ರೈತ ಆದಾಯ ಹೆಚ್ಚಾಗುತ್ತದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರು ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ
ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಗದಗ ಜಿಲ್ಲೆಯ ಭಾಗದಲ್ಲಿ ರೈತರು ಅತಿಹೆಚ್ಚು ಮೆಕ್ಕೆಜೋಳ ಬೆಳೆಯುತ್ತಾರೆ. ಈ ವರ್ಷ ಮೆಕ್ಕೆಜೋಳ ಬೆಂಬಲ ಬೆಲೆಗಾಗಿ ರೈತರು ಪರದಾಡುವ ಪರಿಸ್ಥಿತಿ ಬಂದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಹೀರೆಮಲ್ಲಾಪೂರ ಗ್ರಾಮದಲ್ಲಿ ಎಥನಾಲ್ ಕಂಪನಿ ಆಗುತ್ತಿರುವುದು ರೈತರು ಸಂತೋಷ ಪಡುವಂತಹ ವಿಷಯವಾಗಿದೆ. ಈ ಕಂಪನಿಯಿಂದ ರೈತರ ಮತ್ತು ನಿರುದ್ಯೋಗ ಕಡಿಮೆ ಮಾಡಬಹುದು ಮತ್ತು ತಾಲೂಕು ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತವೆ ಎಂದರಲ್ಲದೇ,
ಕೃಷಿ ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸಿ ಗ್ರಾಮೀಣ ಆರ್ಥಿಕತೆಗೂ ನೆರವಾಗುತ್ತದೆ ಹಾಹಾಗಿ ಕಂಪನಿ ನಿರ್ಮಾನಕ್ಕೆ ಸರ್ಕಾರ ಪರವಾನಗಿ ನೀಡಿ ಕಂಪನಿ ಪ್ರಾರಂಭಿಸಲು ಅನುಮತಿ ನೀಡಬೇಕು.
ಮೆಕ್ಕೆಜೋಳ, ಕಬ್ಬು ಮತ್ತು ಜೋಳದಂತಹ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತದೆ, ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಎಥೆನಾಲ್ ಉತ್ಪಾದನೆಗಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದರಿಂದ ರೈತರಿಗೆ ಹೊಸ ಮಾರುಕಟ್ಟೆ ಲಭ್ಯವಾಗುತ್ತದೆ.
ಗ್ರಾಮೀಣ ಆರ್ಥಿಕತೆ ಚೈತನ್ಯ ತುಂಬುತ್ತದೆ.
ಸರ್ಕಾರ ಹೀರೆಮಲ್ಲಾಪೂರ ಗ್ರಾಮದಲ್ಲಿನ ಎಥನಾಲ್ ಫ್ಯಾಕ್ಟರಿಗೆ ಪ್ರಾರಂಭಿಸಲು ಯಾವುದೇ ಅಡತಡೆ ಬರದಂತೆ ನೋಡಿಕೊಳ್ಳಬೇಕೆಂದು ಡಿ.೧೫ ರ ಸೋಮುವಾರ ಬೆಳ್ಳಿಗ್ಗೆ ೧೦ ಗಂಟೆಯಿಂದ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು, ಈ ಸತ್ಯಾಗ್ರಹವು ಪ್ಯಾಕ್ಟರಿ ಪ್ರಾರಂಭವಾಗುವವರೆಗೂ ನಡೆಯುತ್ತದೆ.
ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರ ಶಂಕರಗೌಡ ಜಾಯನಗೌಡ್ರು, ಆದೇಶ ಹುಲಗೂರು, ಲಕ್ಷ್ಮವ್ವ ಮಳ್ಳಿಗಟ್ಟಿ , ಶರಣಪ್ಪ ಕಮ್ಮಾರ, ಯಲ್ಲಪ್ಪ ವಾಲ್ಮೀಕಿ, ಶಿವಪ್ಪನಾಯಕ ಮಳ್ಳಿಗಟ್ಟಿ, ಅದ್ಮಲ್ ರಹಮಾನ್ ಕಂಡೊಳಿ, ಈಶ್ವರ ಮಳ್ಳಿಗಟ್ಟಿ, ಮುತ್ತವ್ವ ವಾಲ್ಮೀಕಿ ಮತ್ತಿತರಿದ್ದರು.
