Home » News » ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳ ಯಶಸ್ವೀ ತಯಾರಿಗಾಗಿ ಸನ್ಮಾರ್ಗ ಪಿಯು ಕಾಲೇಜು ಹಾಗೂ BASE ಸಂಸ್ಥೆಯ ಶ್ರೇಷ್ಠ ಶೈಕ್ಷಣಿಕ ಒಡಂಬಡಿಕೆ..

ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳ ಯಶಸ್ವೀ ತಯಾರಿಗಾಗಿ ಸನ್ಮಾರ್ಗ ಪಿಯು ಕಾಲೇಜು ಹಾಗೂ BASE ಸಂಸ್ಥೆಯ ಶ್ರೇಷ್ಠ ಶೈಕ್ಷಣಿಕ ಒಡಂಬಡಿಕೆ..

by CityXPress
0 comments

ಶಿಕ್ಷಣವೆಂದರೆ “ಅನುಭವದ ಅರ್ಥಕ್ಕೆ ಸೇರಿಸುವ ಹಾಗೂ ನಂತರದ ಅನುಭವದ ಹಾದಿಯನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಅನುಭವದ ಪುನರ್‌ನಿರ್ಮಾಣ ಅಥವಾ ಮರುಸಂಘಟನೆಎನ್ನಬಹುದು. ಇದರ ಮೂಲಕ ವಿದ್ಯಾರ್ಥಿಯು ತನ್ನ ಭವಿಷ್ಯದ ಅನುಭವವನ್ನು ಸಮೃದ್ಧಗೊಳಿಸುತ್ತಾ ಸರ್ವತೋಮುಖ ಬೆಳವಣಿಗೆಗೆ ಪಾತ್ರನಾಗುತ್ತಾನೆ.

ಇದನ್ನು ಆಧಾರವನ್ನಾಗಿಸಿಕೊಂಡು, ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನಾಭಿವೃದ್ದಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಗಾಗಿ ಗದುಗಿನ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯವು BASE ಸಂಸ್ಥೆಯೊಂದಿಗೆ ಶೈಕ್ಷಣಿಕ ಸಹಯೋಗವನ್ನು ಮುಂದುವರೆಸಿದೆ. ಈ ಮಹತ್ವದ ಒಡಂಬಡಿಕೆ 2017-18 ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿದೆ.

ವಿದ್ಯಾರ್ಥಿಗಳ ಜ್ಞಾನತೃಷೆ ತೀರಿಸಬೇಕು ಎಂಬ ಉದ್ದೇಶದಿಂದ, ಸನ್ಮಾರ್ಗ ಪಿಯು ಕಾಲೇಜಿನ ಉಪನ್ಯಾಸಕರು BASE ಸಂಸ್ಥೆಯ ಅನುಭವೀ ಉಪನ್ಯಾಸಕರು ತಯಾರಿಸಿದ ವಿಷಯಸಂಬಂಧಿ ಟಿಪ್ಪಣಿಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಪೂರೈಸುವ ಮಹತ್ತಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಉದ್ದೇಶ ನಿಜಕ್ಕೂ ಶ್ಲಾಘನೀಯವಾಗಿದೆ.

BASE ಸಂಸ್ಥೆಯು ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಯಶಸ್ಸಿಗಾಗಿ ಪ್ರತ್ಯೇಕವಾಗಿ ವಿಷಯವಾರು ಪಠ್ಯಪುಸ್ತಕಗಳನ್ನು ತಯಾರಿಸಿದ್ದು, ಸಿಇಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2 ವರ್ಷಗಳ ಉದ್ದಕ್ಕೂ ವಿದ್ಯಾರ್ಥಿಗಳನ್ನು ತಯಾರಿಸುತ್ತದೆ. ಈ ಪ್ರಯತ್ನದಿಂದಾಗಿ ನೂರಾರು ವಿದ್ಯಾರ್ಥಿಗಳು ಪಿಯುಸಿ ನಂತರ ಉತ್ತಮ ಅಂಕಗಳೊಂದಿಗೆ ಉನ್ನತ ರ‍್ಯಾಂಕ್ ಗಳಿಸಿ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

banner

You Will Be an Achiever with Special Endeavour” ಎಂಬ ಧ್ಯೇಯವಾಕ್ಯವನ್ನು ಮೀರಿ, BASE ಸಂಸ್ಥೆಯ ಸ್ಥಾಪಕರಾದ ಶ್ರೀ ಅನಂತ ಕುಲಕರ್ಣಿಯವರು ತಮ್ಮ ಶ್ರೇಷ್ಠ ಶಿಕ್ಷಣದ ಪರಂಪರೆಯ ಮೂಲಕ ವಿದ್ಯಾರ್ಥಿಗಳಲ್ಲಿ ‘ಅನಂತಜ್ಞಾನಸಂಪತ್ತಿಯನ್ನು ಹರಡಿ ಸಮಾಜ ನಿರ್ಮಾಣದ ಹಾದಿಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಿದ್ದಾರೆ.

ಸನ್ಮಾರ್ಗ ಪಿಯು ಕಾಲೇಜು, ಅಂಕಗಳಲ್ಲಷ್ಟೇ ಅಲ್ಲದೆ ಜ್ಞಾನದಲ್ಲಿಯೂ ಪ್ರಥಮರಾಗುವ ವಿದ್ಯಾರ್ಥಿಗಳ ಪೀಳಿಗೆ ರೂಪಿಸಬೇಕೆಂಬ ಗುರಿಯೊಂದಿಗೆ BASE ಜೊತೆ ಕೈಜೋಡಿಸಿ ವಿಜ್ಞಾನ ವಿಷಯಗಳನ್ನು ಮನದಟ್ಟಾಗುವಂತೆ ಬೋಧಿಸಲು ಮುಂದಾಗಿದೆ. ಈ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ವಿಷಯದ ಮೂಲಭೂತ ಅಂಶಗಳಿಂದ ಪ್ರಾಯೋಗಿಕ ಅನ್ವಯಕ್ಕೆ ತಲುಪುವ ಸೇತುವೆಯಾಗಿ ಕೆಲಸ ಮಾಡುತ್ತಿವೆ.

ಕಾಲೇಜಿನ ಅಧ್ಯಕ್ಷ ಪ್ರೋ. ರಾಜೇಶ್ ಕುಲಕರ್ಣಿ ಅವರು, “ಎಲ್ಲ ವಿದ್ಯಾರ್ಥಿಗಳು ತಮ್ಮ ಕಾಲೇಜಿಗೆ ಮಾತ್ರವಲ್ಲದೆ ಜಾಗತಿಕ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾದರೆ, ನಿರಂತರ ಅಭ್ಯಾಸ ಹಾಗೂ ಶ್ರದ್ದೆಯೊಂದಿಗೆ ಈ ಪಠ್ಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಶ್ರೇಷ್ಠ ಉದ್ದೇಶದ ಕಾರ್ಯಸಾಧನೆಯ ಹಿಂದೆ, ಸಂಸ್ಥೆಯ ಪದಾಧಿಕಾರಿಗಳಾದ ಪ್ರೋ. ರೋಹಿತ್, ರಾಹುಲ್ ಒಡೆಯರ್, ಪ್ರೋ. ಉಡುಪಿ ದೇಶಪಾಂಡೆ, ಪ್ರೋ. ಸೈಯದ್ ಮತೀನ್ ಮುಲ್ಲಾ, ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದ, ಮತ್ತು ಆಡಳಿತಾಧಿಕಾರಿ ಶ್ರೀ ಎಂ.ಸಿ. ಹಿರೇಮಠ ಅವರ ಸಮರ್ಪಿತ ಶ್ರಮವಿದೆ. ಅವರು ವಿದ್ಯಾಲಯದ ಪ್ರಾರಂಭದಿಂದಲೇ ಶೈಕ್ಷಣಿಕ ಮಟ್ಟದ ತಾರತಮ್ಯವಿಲ್ಲದ ಸಜ್ಜನ ಶಿಕ್ಷಣ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಶ್ರದ್ಧೆಯ ಪ್ರಯತ್ನ ಯಶಸ್ವಿಯಾಗಲು ಪಾಲಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ. ಈ ಶೈಕ್ಷಣಿಕ ಯೋಜನೆಯು ಗ್ರಾಮೀಣ ಭಾಗಗಳಿಗೂ ತಲುಪಬೇಕು, ಮತ್ತು ಅಲ್ಲಿ ವಿದ್ಯಾರ್ಥಿಗಳಿಗೆ ಸಹಜವಾಗಿ ಜ್ಞಾನಪ್ರಾಪ್ತಿಗೆ ಸಾಧನೆಯ ದಾರಿಯಾಗಿ ಪರಿಣಮಿಸಬೇಕು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb