ಲಕ್ಷ್ಮೇಶ್ವರ : ತಾಲೂಕಿನ ಬಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದ ಪಾರ್ವತಿ ದೇವಸ್ಥಾನದ ಹತ್ತಿರ ಕುಡಿಯುವ ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಕಲುಷಿತಗೊಂಡಿದ್ದು, ಅದೇ ನೀರನ್ನು ಕುಡಿಯುವ ಜನ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ.
ವರದಿ : ಪರಮೇಶ ಎಸ್ ಲಮಾಣಿ
ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ತಾಲೂಕಿಗೆ ಹೊಂದಿಕೊಂಡಿರುವ ಪಂಚಾಯಿತಿ. ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮ ತೆರಿಗೆ ಸಂದಾವಾಗುವದಿಲ್ಲವೇ, ಆದರೆ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಜನರು ಪಾಚಿ ಕಟ್ಟಿದ ಹಾಗೂ ಹುಳುಗಳಿರುವ ಮತ್ತು ಕಲುಷಿತವಾಗಿರುವ ನೀರನ್ನು ಪ್ರತಿನಿತ್ಯ ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಕಿರು ನೀರು ಸರಬರಾಜು ಯೋಜನೆಗಳಡಿ ಗ್ರಾಮಗಳಲ್ಲಿ ಅಲ್ಲಲ್ಲಿ ಸಣ್ಣ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿನಿತ್ಯ ಅಥವಾ ಅವಶ್ಯಕತೆಗನುಗುಣವಾಗಿ ಗ್ರಾಮದ ಜನರಿಗೆ ನೀರನ್ನು ಸರಬರಾಜು ಮಾಡುವುದು ಮತ್ತು ಗ್ರಾಮದ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ಕಾಳಜಿ ವಹಿಸುವುದು ಯೋಜನೆಯ ಉದ್ದೇಶ. ಆದರೆ ವಾಟರ್‌ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಬೇಕಾದ ಸ್ಥಳೀಯ ವಾಟರ್‌ಮನ್‌ಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಜನರು ಕಲುಷಿತ ನೀರನ್ನೇ ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
