ಮುಂಡರಗಿ: ಸರ್ಕಾರಿ ಪ್ರೌಢಶಾಲೆಗೆ ಆಗ್ರಹಿಸಿ ತಹಶೀಲ್ದಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ದೇವಪ್ಪ ಇಟಗಿ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಪಟ್ಟಣದ ನಿವಾಸಿಗಳು ಕೂಡಿಕೊಂಡು ಕಳೆದ ಮೂರು ದಿನಗಳಿಂದ ಸತ್ಯಾಗ್ರಹ ಆರಂಭಿಸಿದ್ದಾರೆ.ಮುಂಡರಗಿ ತಾಲೂಕೆಂದು ಘೋಷಣೆಯಾಗಿ ದಶಕಗಳೇ ಕಳೆದರೂ ವರ್ಷಗಳಾದರೂ, ಒಂದೇ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲವಾಗಿದೆ.

ತಾಲೂಕಾ ಕೇಂದ್ರದಲ್ಲಿ ಸರ್ಕಾರಿ ಪ್ರೌಢ ಶಾಲೆ ಇಲ್ಲದಿರೋದು ನೋವಿನ ಸಂಗತಿ.ಈಗಾಗಲೇ ಅನೇಕ ಬಾರಿ ಪ್ರತಿಭಟನೆ ಮನವಿ ಮಾಡಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಗಮನ ವಹಿಸುತ್ತಿಲ್ಲ.ಪಟ್ಟಣದ ಬಡ ಮಕ್ಕಳು ಹಳ್ಳಿಗಳಿಗೆ ಹೋಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯಬೇಕಾದ ಸ್ಥಿತಿ ಇದೆ.
ಹೀಗಾಗಿ ಫೆಬ್ರವರಿ 7 ರಂದು ಅಧಿವೇಶನದಲ್ಲಿ ಬಜೆಟ್ ಘೋಷಣೆ ವೇಳೆ ಮುಂಡರಗಿ ಪಟ್ಟಣಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ. ಪ್ರೌಢಶಾಲೆ ಘೋಷಣೆ ಮಾಡುವವರೆಗೂ ಉಪವಾಸ ಸತ್ಯಾಗ್ರಹ ಕೈ ಬಿಡುವದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿರುವ ಪ್ರತಿಭಟನಾಕಾರರು, ಇಂದು ತಹಶೀಲ್ದಾರ ಕಚೇರಿ ಎದುರಿನ ರಸ್ತೆ ಸಂಚಾರ ತಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.