ಗದಗ:ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರ ಅಧಿಕಾರ ಮೊಟಕು ವಿಚಾರವಾಗಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಗ್ರಾಮೀಣ ವಿಶ್ವವಿದ್ಯಾಲಯ ಬಳಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮೊದಲು ವಿಶ್ವ ವಿದ್ಯಾಲಯಕ್ಕೆ ಮುತ್ತಿಗೆ ಹಾಕಲು ಎಬಿವಿಪಿ ಕಾರ್ಯಕರ್ತರು ಮುಂದಾಗಿದ್ರು. ಆದರೆ ಪಲೀಸರು ವಿವಿಯ ಮುಂಭಾಗದಲ್ಲಿ ಬಿಡದೆ, ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ನಿಲ್ಲಿಸಿದ್ರು, ಹಠ ಬಿಡದ ಸ್ಟೂಡೆಂಟ್ಸ್ ನಾವು ವಿವಿ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದರು.ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ದಾದ ನಡೆಯಿತು.
ಸ್ಟೂಡೆಂಟ್ ಪ್ರತಿಭಟನೆ ನಡೆಸುತ್ತಿದ್ದಂತೆ, ಪೊಲೀಸರು ವಿವಿ ಮುಂದೆ ಹೋರಾಟಕ್ಕೆ ಅವಕಾಶ ನೀಡಿದರು. ಇಷ್ಟು ವರ್ಷಗಳ ಕಾಲ ವಿವಿಯ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ನಿರ್ವಹಣೆ ಮಾಡ್ತಾಯಿದ್ರು. ಈ ಹುದ್ದೆಯನ್ನು, ಮುಖ್ಯಮುಂತ್ರಿಗೆ ನೀಡಲಾಗಿದೆ ಎಂದು ಇದೆ ನವೆಂಬರ್ 27 ರಂದು, ನಡೆದ, ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ರಾಜಕೀಯ ಸ್ಥಾನವಾಗಿ ಪರಿವರ್ತನೆಯಾಗುವ ಲಕ್ಷಣ ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಬೇಕು. ಇಲ್ಲವಾದರೆ, ಸುವರ್ಣ ಸೌಧದ ಮುಂದೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡುವ ಮೂಲಕ ಮನವಿ ನೀಡಿದರು.