ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ವಿರುದ್ದ ಗದಗ ಜಿಲ್ಲೆಯ ಡೋಣಿ ಸಮೀಪ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಹಾಗೂ ಪರಿಸರಾಸಕ್ತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೆಳಗಾವಿ ವಿಭಾಗದ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಶಿವಕುಮಾರ ಸ್ವಾಮಿಜಿ ಮಾತನಾಡಿ, ಇತ್ತೀಚೆಗೆ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗಳ ಮೇಲೆ ನಿರ್ಧಾರ ಕೈಗೊಳ್ಳುವದನ್ನ ಸರ್ಕಾರ ಮುಂದೂಡಿದೆ ವಿನಃ ಕೈ ಬಿಟ್ಟಿಲ್ಲ.ಇದೊಂದು ಇಬ್ಬಗೆಯ ನೀತಿಯಾಗಿದ್ದು, ಕಪ್ಪತ್ತಗುಡ್ಡದ ಮೇಲೆ ಸರ್ಕಾರದ ತೂಗುಕತ್ತಿ ಜೋತಾಡುತ್ತಿದೆ. ಯಾವುದೇ ಕ್ಷಣದಲ್ಲಿ ಸರ್ಕಾರ ತಪ್ಪು ನಿರ್ಧಾರ ಕೈಗೊಳ್ಳುವ ಅಪಾಯವಿದೆ.ಸರ್ಕಾರದ ತಪ್ಪು ನಿರ್ಧಾರದ ವಿರುದ್ಧ ನಾವು ತೀವ್ರವಾದ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದರು.
ಈ ವೇಳೆ, ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮೀತಿ, ಪರಿಸರಕ್ಕಾಗಿ ನಾವು, ರಾಜ್ಯ ಘಟಕ, ಪರಿಸರಕ್ಕಾಗಿ ನಾವು ಹಾವೇರಿ ಜಿಲ್ಲಾ ಘಟಕ, ಹುಬ್ಬಳ್ಳಿಯ ಕಾನೂನು ಮಹಾವಿದ್ಯಾಲಯ, ಹಾಗೂ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು,ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದವರು ಸೇರಿದಂತೆ ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟ ಜಿಲ್ಲೆಗಳಿಂದ ಪರಿಸರಾಸಕ್ತರು ಭಾಗವಹಿಸಿದ್ದರು,