ಲಕ್ಷ್ಮೇಶ್ವರ: ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ಶಿರಹಟ್ಟಿ ಲಕ್ಷ್ಮೇಶ್ವರ ಮುಂಡರಗಿ ರೈತಪರ ಸಂಘಟನೆಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಪಟ್ಟಣದಲ್ಲಿ ಇತ್ತಿಚಿಗೆ ೧೮ ದಿನಗಳ ನಿರಂತರ ಅಹೋರಾತ್ರಿ ಧರಣಿ ಮತ್ತು ಡಾ. ಕುಮಾರ ಮಹಾರಾಜರ ಉಪವಾಸ ಸತ್ಯಾಗ್ರಹದಿಂದ ಎಚ್ಚತ್ತ ಸರ್ಕಾರ ಮೊದಲು 5 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಗೆ ಅವಕಾಶ ಮಾಡಿಕೊಟ್ಟಿತ್ತು ಮತ್ತೆ ವೇದಿಕೆಯಿಂದ ಹೋರಾಟ ತೀತ್ರವಾದಾಗ ೨೦ ಕ್ವಿಂಟಾಲಗೆ ಎರಿಸಿತು, ಇಗ ಸರ್ಕಾರ ೫೦ ಕ್ವಿಂಟಾಲ ಮೆಕ್ಕೆಜೋಳ ಖರೀದಿಗೆ ತೀರ್ಮಾಣ ತೆಗೆದುಕೊಂಡಿದ್ದು ಖಷಿಯ ವಿಚಾರ ಇದರಿಂದ ರೈತರ ಪರವಾಗಿ ಸರಕಾರಕ್ಕೆ ಧನ್ಯವಾದ ಹೇಳುತ್ತೇವೆ ಎಂದು ವೇದಿಕೆಯ ಅಧ್ಯಕ್ಷ ಮಂಜುನಾಥ ಮಾಗಡಿ, ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಅದ್ಯಕ್ಷ ರವಿಕಾಂತ ಅಂಗಡಿ ಮತ್ತು ಎಂ ಎಸ್ ದೊಡ್ಡಗೌಡರ ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ
ಪಟ್ಟಣದ ಪತ್ರಿಕಾ ಕಾರ್ಯಾಲದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿರಂತರ ಹೋರಾಟದಿಂದ ಬೇರೆ ಬೇರೆ ರಾಜ್ಯಗಳಲ್ಲಿ ರೈತರು ಹೋರಾಟಕ್ಕೆ ಮುಂದಾದರು. ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಿ ಸರಕಾರ ಮೊದಲು ೫ ಕ್ವಿಂಟಾಲ್ ಖರೀದಿ ಮಾಡುತ್ತೇವೆ ಎಂದು ಹೇಳಿ ನಂತರ ೨೦ ಕ್ವಿಂಟಾಲ ಖರೀದಿ ಮಾಡಿದರು ಇಗ ಸರಕಾರ ೫೦ ಕ್ವಿಂಟಾಲ್ ಖರೀದಿ ಮಾಡುತ್ತಿದ್ದು ಸಂತೋಷದ ವಿಷಯ ರೈತರ ಪರವಾಗಿ ಸರಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇವೆ ಎಂದು ಹೇಳಿದರು.
ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಮೆಕ್ಕೆಜೋಳ ಕೊಡಬೇಕು, ದಲ್ಲಾಲಿಗಳು ಮತ್ತು ಮಧ್ಯವರ್ತಿಗಳಿಗೆ ಮೆಕ್ಕೆಜೋಳ ಕೊಡಬಾರದು. ತಮಗೆ ಉಳಿಯುವ ಹಣ ಸಾಲ ತಿರಿಸೊಕೆ ಆಗಲಾರದ ಈ ಸ್ಥಿತಿಯಲ್ಲಿ ನೀವು ದಲ್ಲಾಲಿಗಳಿಗ ಮೊರೆ ಹೋಗಬಾರದು, ಸರ್ಕಾರ ಖರೀದಿ ಕೇಂದ್ರ ತಮಗಾಗಿ ತೆರೆದಿದೆ ಎಲ್ಲಾ ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಬಂದು ಕೊಡಬೇಕು ಎಂದು ತಿಳಿಸಿದರಲ್ಲದೇ,
ಸಮಗ್ರ ರೈತ ಹೋರಾಟ ವೇದಿಕೆಯು ರೈತರಿಗೆ ಅನ್ಯಾಯವಾದಾಗ ಮೊದಲು ಬಂದು ನಿಲ್ಲುತ್ತದೆ. ಬಗರ ಹುಕುಂ, ಬೆಳೆ ವಿಮಾ, ಬೆಳೆ ಹಾನಿಯನ್ನು ಸರ್ಕಾರ ನೀಡಬೇಕೆಂದು ಹೋರಾಟಗಳು ನಡೆದಿತ್ತು, ಅಂತಹ ರೈತರ ಪರ ಹಲವಾರು ಹೋರಾಟದ ಮೂಲಕ ರೈತರ ಧ್ವನಿಯಾಗಿ ನಿಂತಿದೆ ಎಂದರು.
ನಂತರ ಪಟ್ಟಣದ ಶಿಗ್ಲಿ ನಾಕಾದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ, ಪಟಾಕಿ ಹಚ್ಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೀಲಪ್ಪ ಶೆರಸೂರಿ,ನಾಗರಾಜ ಚಿಂಚಲಿ, ಟಾಕಪ್ಪ ಸಾತಪೂತೆ,ಮುದಕಣ್ಣ ಗದ್ದಿ, ಗುರಪ್ಪ ಮುಳಗುಂದ, ಮಂಜುನಾಥ ಶೆರಸೂರಿ, ಗಂಗಾಧರ ಖರಾಟೆ, ಶಿವಾನಂದ ಲಿಂಗಶೆಟ್ಟಿ, ಮಲ್ಲಿಕಾರ್ಜುನ ನೀರಾಲೋಟ, ಫಕ್ಕಿರೇಶ ಅಣ್ಣಿಗೇರಿ, ಶಿದ್ದನಗೌಡ ಬಳ್ಳೂಳ್ಳಿ, ಮಂಜುನಾಥ ಕೊಡಳ್ಳಿ, ಸುರೇಶ ಹಟ್ಟಿ, ಬಸವರಾಜ ಜಾಲಗಾರ,
ಪ್ರಕಾಶ ಮೇವುoಡಿ, ಶಿವನಗೌಡ ಪಾಟೀಲ್, ಕರಿಯಪ್ಪ ಹುರಕನವರ, ಮುತ್ತಣ್ಣ ಟೋಕಾಳಿ,
ಅಭಿಯ ಮಾಣಿಕ ಸೇರಿದಂತೆ ಮತ್ತಿತರಿದ್ದರು.
