ಗದಗ: ಗದಗನಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಪ್ರಥಮ ಮತ್ತು ಸಿಂಗಲ್ಸ್ನಲ್ಲಿ ದ್ವೀತಿಯ ಸ್ಥಾನ ಪಡೆದು ಗದಗ ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಟಿ.ಎಲ್.ರಾಜಕುಮಾರ ರವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶ್ರೀ ಟಿ.ಎಲ್.ರಾಜಕುಮಾರ ರವರು ಅಲ್ಲಿಯೂ ಯಶಸ್ಸು ಗಳಿಸಲಿ ಎಂದು ಗೃಹರಕ್ಷಕ ದಳದ ಸಮಾದೇಷ್ಟರಾದ ಶ್ರೀ ಎಂ.ಬಿ.ಸಂಕದ (ಕೆ.ಎಸ್.ಪಿ.ಎಸ್), ಜಿಲ್ಲಾ ಭೋದಕರಾದ ಶ್ರೀ ಕಿರಣಕುಮಾರ ಕಟಗಿ ಮತ್ತು ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.