ಜೋಗ ಜಲಪಾತ ಯಾರಿಗೆ ಗೊತ್ತಿಲ್ಲ ಹೇಳಿ, ನಮ್ಮ ಕರ್ನಾಟಕ ಹೆಮ್ಮೆಯ ಪ್ರವಾಸಿ ತಾಣಗಳಲ್ಲಿ ಜೋಗ ಜಲಪಾತ ಕೂಡ ಒಂದು. ಆದರೆ ನಿವೇನಾದ್ರೂ ಅಲ್ಲಿಗೆ ಹೋಗಬೇಕಂದ್ರೆ, ಸ್ಬಲ್ಪ ವೇಟ್ ಮಾಡಿ.
ಹೌದು, ಶಿವಮೊಗ್ಗದ ಸಾಗರ ತಾಲ್ಲೂಕಿನ ಜೋಗ ಜಲಪಾತ ಪ್ರವಾಸಿ ತಾಣದ ಪ್ರವೇಶಕ್ಕೀಗ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತಗಳ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಜನವರಿ 01 ರಿಂದ ಮಾರ್ಚ್ 15 ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಹೀಗಾಗಿ ಜೋಗ ಜಲಪಾತದ ಪ್ರವಾಸಕ್ಕೀಗ ಸ್ವಲ್ಪ ವಿರಾಮ ನಿಡೋದು ಒಳ್ಳೆದು.