ಗದಗ : ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಗ್ರಾಮ ಪಂಚಾಯತಿ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಲೋಕಾರ್ಪಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಹೂವಿನ ಶಿಗ್ಲಿ ವೀರಕ್ತಮಠದ ಚನ್ನವೀರ ಮಹಾಸ್ವಾಮಿಗಳು ದೃಢ ಸಂಕಲ್ಪ ಆತ್ಮವಿಶ್ವಾಸ ಇಚ್ಛಾಶಕ್ತಿ ಇದ್ದರೆ ಎನ್ನೆಲ್ಲಾ ಸಾಧನೆ ಮಾಡ ಬಹುದು ಎನ್ನುವುದಕ್ಕೆ ದೊಡ್ಡೂರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ನಿರ್ಮಿಸಿದ ಈ ನೂತನ ಕಟ್ಟಡವೇ ಸಾಕ್ಷಿ ಎಂದರು.
ವರದಿ : ಪರಮೇಶ ಎಸ್ ಲಮಾಣಿ
ಜನಪ್ರತಿನಿಧಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆ ಹರಿಸಿ ಉತ್ತಮ ಆಡಳಿತ ನೀಡುವ ಮೂಲಕ ಮತದಾರರ ಒಲವನ್ನು ಗಳಿಸಿಕೊಳ್ಳಬೇಕು. ಇಂದು ಎಲ್ಲೆಡೆ ರಾಜಕಾರಣ ಎಂದರೆ ಮೂಗು ಮೂರಿಯು ಸ್ಥಿತಿ ಇದ್ದು ಆದರೆ ಗ್ರಾಮಸ್ಥರ ಸಹಕಾರ ಸದಸ್ಯರ ಒಗ್ಗಟ್ಟು ಪಾರದರ್ಶಕವಾದ ಸೊಚ್ಛವಾದ ಆಡಳಿತ ನಡೆಸುವ ಮೂಲಕ ಇಂಥ ಸಾಧನೆ ಮಾಡಲು ಸಾಧ್ಯ ಎಂದು ಸಾಬೀತು ಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾ.ಪಂ.ಮಹಾ ಓಕ್ಕೂಟದ ರಾಜ್ಯ ಅಧ್ಯಕ್ಷರಾದ ಕಾಡಶೆಟ್ಟಿ ಹಳ್ಳಿ ಸತೀಶ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅವರು ಸ್ವಾತಂತ್ರ್ಯ ಸರಕಾರಗಳಿದಂತೆ ಕೇಂದ್ರ ಸರಕಾರವಾಗಲಿ ರಾಜ್ಯ ಸರಕಾರವಾಗಲಿ ಗ್ರಾಮ ಪಂಚಾಯತಿಗಳು ತಮ್ಮ ಶಾಖೆ ಎಂದು ತಪ್ಪು ಕಲ್ಪನೆಗಳನ್ನು ಬಿಡಬೇಕು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತಲುಪಿಸುವ ಏಕೈಕ ಸಂಸ್ಥೆಯಾಗಿದ್ದು ಇಲ್ಲಿ ಯಾರದೇ ಹಸ್ತಕ್ಷೇಪಕ್ಕೆ ಅಧಿಕಾರ ಅಲ್ಲ ಸರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡದೆ ಅವುಗಳ ಬಲವರ್ಧನೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ ಗ್ರಾಮದ ಅಭಿವೃದ್ಧಿ ಗೆ ಗ್ರಾಮ ಪಂಚಾಯಿ ಸದಸ್ಯರು ಎಷ್ಟು ಮುಖ್ಯವೋ, ಗ್ರಾಮಸ್ಥರು ಅಷ್ಟೆ ಮುಖ್ಯವಾಗುತ್ತಾರೆ. ಅಭಿವೃದ್ಧಿ ಕೆಲಸ ಆಗುವಾಗ ಯಾವುದೇ ಅಡತಡೆ ಹಾಕದೇ, ರಾಜಕೀಯ ಮಾಡದೆ ಕೆಲಸ ಮಾಡಿಸಿಕೊಳ್ಳಬೇಕು, ದೊಡ್ಡೂರ ಗ್ರಾಮದ ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಲು ನಾನು ಸಿದ್ಧನಿದ್ದೆನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಪಿ.ಬಳಿಗಾರ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರು ಈಳಿಗೇರ ದೇವೇಂದ್ರಪ್ಪ ತೋಟದ ಅಮರಪ್ಪ ಗುಡಕುಂಟಿ ಸುನೀಲ್ ಮಹಾಂತಶೆಟ್ಟರ ಮಾತನಾಡಿದರು.
ಎನ್.ಎಚ್.ಹಡಪದ ಸ್ವಾಗತಿಸಿದರು ಪ್ರಾರ್ಥನಾ ಗೀತೆಯನ್ನು ದೊಡ್ಡೂರ ಶಾಲೆಯ ಮಕ್ಕಳು ಹಾಡಿದರು ಪ್ರಾಸ್ತಾವಿಕವಾಗಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿದರು ಈಶ್ವರ ಮೇಡ್ಲೇರಿ ಕಾರ್ಯಕ್ರಮವನ್ನು ನಿರೂಪಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಪಂಚ ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ನಾಗರಾಜ ಮಡಿವಾಳರ,ಜಿ.ಆರ್.ಕೊಪ್ಪದ ಸುನೀಲ್ ಮಹಾಂತಶೆಟ್ಟರ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಈಳಗೇರ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ ಬಳಿಗಾರ ಎಮ್.ಎಸ್.ದೊಡ್ಡಗೌಡ್ರ,ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ,ಮಲ್ಲಿಕಾರ್ಜುನ ಪಾಟೀಲ್,ರಿಯಾಜ ಕೆ.ಕೆ.ಸುಶೀಲಾ ಲಮಾಣಿ ಫಕ್ಕೀರಗೌಡ್ರ ಭರಮಗೌಡ್ರ,ನ, ನಿಲವ್ವ ಕಟಗಿ ನಿಂಗಪ್ಪ ಬಂಕಾಪೂರ,ಜಯಮ್ಮ ಮಣ್ಣಮ್ಮನವರ,ದೇವಕ್ಕ ಭಜಕ್ಕನವರ,ಮಲ್ಲಪ್ಪ ತೋಟದ,ಸಾಕವ್ವ ಲಮಾಣಿ ಇಂದ್ರವ್ವ ಲಕ್ಷ್ಮಣ ಲಮಾಣಿ, ಲಕ್ಷ್ಮೀ ಅಂಗಡಿ ಸೇರಿದಂತೆ ಅನೇಕರು ಹಾಜರಿದ್ದರು.
