ಬೆಂಗಳೂರು: ಪುರುಷರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ವಿತರಿಸುವ ಹೊಸ ಯೋಜನೆ ಜಾರಿಗೊಳಿಸಿ, ಉಚಿತ ಮದ್ಯ ವಿತರಣೆಗೆ ವ್ಯವಸ್ಥೆ ಮಾಡಿ ಎಂದು JDSನ ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದ್ದಾರೆ.

ಸದನದಲ್ಲಿ ಬಜೆಟ್‌ನ ಚರ್ಚೆಯಲ್ಲಿ ಮಾತನಾಡಿರೋ ಅವರು, ದುಡಿಯುವ ಜನರು ಮದ್ಯ ಸೇವಿಸುತ್ತಾರೆ. ಅದನ್ನು ತಪ್ಪಿಸಲು ಆಗುವುದಿಲ್ಲ. ಹೀಗಾಗಿ ಉಚಿತ ಮದ್ಯ ವಿತರಿಸುವ ಯೋಜನೆ ಜಾರಿಗೊಳಿಸಬೇಕು. ₹40,000 ಕೋಟಿ ಅಬಕಾರಿ ತೆರಿಗೆ ಸಂಗ್ರಹಿಸಲು ಜನರಿಗೆ ಲಕ್ಷಾಂತರ ಕೋಟಿ ರೂ. ಮೌಲ್ಯದ ಮದ್ಯ ಕುಡಿಸುವುದು ಸರಿಯಲ್ಲ ಎಂದಿದ್ದಾರೆ.