ನರಗುಂದ: ವಿಧಾನ ಸಭೆ ಮತಕ್ಷೇತ್ರದ ಅಭಿವೃದ್ದಿ ಬಗ್ಗೆ ಮತ್ತು ಸರ್ಕಾರ ಬೆಣ್ಣಿ ಹಳ್ಳದ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸಿದ್ದನೆ, ಆದರೆ ಶಾಸಕರು ನನ್ನ ಬಗ್ಗೆ ಗುತ್ತಿಗೆದಾರ ಹಣ ಪಡೆದಿದ್ದೆನೆ ಎಂದು ಆರೋಪ ಮಾಡಿದ್ದು ಸತ್ಯಕ್ಕೆ ದೂರವಾದ್ದದೆಂದು ಮಾಜಿ ಶಾಸಕ ಬಿ.ಆರ್.ಯಾವಗಲ್ ಹೇಳಿದರು.
ಅವರು ಪಟ್ಟಣದ ಮಲಪ್ರಭಾ ಆಯಿಲ್ ಮಿಲ್ ನ ತಮ್ಮ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ನಾನು ಈ ಹಿಂದೆ ಕ್ಷೇತ್ರದ ಶಾಸಕರು ಸಚಿವ ಎಚ್.ಕೆ.ಪಾಟೀಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಅಭಿವೃದ್ದಿ ಮಾಡುತ್ತಿದ್ದಾರೆಂದು ಹೇಳಿದ್ದೆನೆ, ಆದರೆ ಶಾಸಕರು ಅದಕ್ಕೆ ಬೇರೆ ಅರ್ಥ ತಿಳಿದುಕೊಂಡು ಯಾವಗಲ್ ಅವರು ಈ ಕ್ಷೇತ್ರದ 500 ಕೋಟಿ ಅಭಿವೃದ್ದಿ ಕಾಮಗಾರಿ ಕಳೆಪೆ ಆಗಿದ್ದೆಂದು ಗುತ್ತಿಗೆದಾರರ ಬಿಲ್ ಗೆ ತಡೆ ಮಾಡಿ ಅವರಿಂದ 6 ಕೋಟಿ ಹಣ ಪಡೆದಿದ್ದಾರೆಂದು ಆರೋಪ ಮಾಡಿದ್ದು ಸತ್ಯಕ್ಕೆ ದೂರವಾದದ್ದು, ಈ ಕ್ಷೇತ್ರದಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಬೇಕೆಂದು ನನ್ನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪವನ್ನ ಸಿ.ಸಿ.ಪಾಟೀಲ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೇಲಾಗಿ ಇತ್ತೀಚಿಗೆ ಶಾಸಕ ಪಾಟೀಲರು ದರ್ಪದಿಂದ ವಿರೋಧ ಪಕ್ಷದವರ ಮೇಲೆ ಆರೋಪ ಮಾಡುತ್ತಿರವದು ಖಂಡನೀಯ, ಭಾರತ ದೇಶ ಪ್ರಜಾಪ್ರಭುತ್ವದ ದೇಶವಾಗಿದೆ, ಯಾರೆ ತಪ್ಪು ಮಾಡಿದರೆ ಅದನ್ನು ಆರೋಪ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದರು.
ನಾನು ಈ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬಂದು 40 ವರ್ಷವಾಯಿತು, ನನ್ನ ಅಧಿಕಾರದ ಅವಧಿಯಲ್ಲಿ ಮತದಾರರ ಆರ್ಶೀವಾದಿಂದ ಇಂಜಿನೀಯರಿಂಗ್ ಕಾಲೇಜ,ಡಿಪ್ಲೋಮಾ ಕಾಲೇಜ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಅನುದಾನ ತಂದು ಅಭಿವೃದ್ದಿ ಮಾಡಿದ್ದನೆ. ಅದೇ ರೀತಿ ಈ ಕ್ಷೇತ್ರ ಮಲಪ್ರಭಾ ಕಾಲುವೆ ಪುನಶ್ವೇತನ, ಜಲಾಶಯದಿಂದ ನೇರವಾಗಿ ಕುಡಿಯುವ ನೀರಿನ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ದಿ ಮಾಡಿದ ತೃಪ್ತಿ ನನಗಿದೆ. ನಾನು ಅಭಿವೃದ್ದಿ ಮಾಡಿದ್ದನ್ನು ಸಹಿಸದ ಪಾಟೀಲರು ಈ ರೀತಿ ನನ್ನ ಬಗ್ಗೆ ಕೀಳು ಮಟ್ಟದ ಆರೋಪ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಈ ಹಿಂದೆ ಮಲಪ್ರಭಾ ಆಯಿಲ ಮಿಲ್ ಪುನಶ್ವೇತನ ಮಾಡಬೇಕೆಂದು ಮಿಲ್ ಪ್ರಾರಂಭ ಮಡಲು ಮುಂದಾಗಿದ್ದೆ, ಆದರೆ ಅದಕ್ಕೆ ಶಾಸಕರು ಕಲ್ಲು ಹಾಕಿದರು. ಅದೇ ರೀತಿ ಪಟ್ಟಣಕ್ಕೆ 2 ಸಾವಿರ ಮನೆಗಳನ್ನು ತಂದಿದ್ದೆ. ಈ ಮನೆಗಳು ಆಗದಾಗೆ ನೋಡಿಕೊಂಡರು ಎಂದರು.
ಕ್ಷೇತ್ರದಲ್ಲಿ ಯಾವಗಲ್ ಅವರು ಚಕ್ ಬಂದಿ ಹಾಕಿ ಹಣ ವಸೂಲಿ ಮಾಡುತ್ತಾರೆ.ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೆನೆ ಎಂದು ಹೇಳಿರೋ ಶಾಸಕರು ಅಧಿವೇಶನದಲ್ಲಿ ಇದನ್ನು ಚರ್ಚೆ ಮಾಡಲೇಬೆಕೆಂದು ಸವಾಲ್ ಹಾಕಿದರು.
ವಿಧಾನ ಸಭೆ ಚುನಾವಣಿ ಪೂರ್ವದಲ್ಲಿ ತಮ್ಮ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ದಿ ಹೆಸರಲ್ಲಿ 500 ಕೋಟಿ ಹಣ ಬಿಡುಗಡೆ ಮಾಡಿ ವಿವಿಧ ಗುತ್ತಿಗೆದಾರರ ಕಾಮಗಾರಿ ನೀಡಿ ಅದರಲ್ಲಿ ಎಷ್ಟು ಪರ್ಸಂಟ ಹಣ ಪಡೆದಿದ್ದಾರೆಂದು ನಮ್ಮಗೆ ಗೊತ್ತು. ಈ ಕ್ಷೇತ್ರದಲ್ಲಿ ನನ್ನ ಜೊತಗೆ ಇದ್ದ ಎಲ್.ಎಸ್.ಪಾಟೀಲರನ್ನು ಪುರಸಭೆ ಅಧ್ಯಕ್ಷರನ್ನಾಗಿ, ಎಪಿಪಿಎಂಸಿ ಸದಸ್ಯರನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ್ದನೆ. ಇವರು ಮಾಜಿ ಶಾಸಕ ಎಸ್.ಎಫ್.ಪಾಟೀಲರ ಕುಟುಂಬಕ್ಕೆ ಏನು ಮಾಡಿದ್ದಾರೆಂದು ತಿಳಸಬೇಕೆಂದು ಹೇಳಿದರು.
ಕಾಂಗ್ರೇಸ ಪಕ್ಷದ ಯುವ ಮುಖಂಡ ವಿವೇಕ ಯಾವಗಲ್ ವರು ಮಾತನಾಡಿ ಶಾಸಕ ಪಾಟೀಲರು ನಾನು 25 ಸಾವಿರ ಕಮಿಷಿನಗೆ ಬೆಂಗಳೂರಲ್ಲಿ ಸಚಿವರ ಕಛೆರಿಗೆ ಅಲೆದಾಟ ಮಾಡುವೆನೆಂದು ಹೇಳಿದ್ದು ಸುಳ್ಳು, ನಾನು ನನ್ನ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಮಾಡಿಸಿಕೊಡಲು ಹೋಗುತ್ತೇನೆ, ಆದರೆ ಶಾಸಕರಿಗೆ ಮತ್ತೊಬ್ಬರ ಮಕ್ಕಳು ರಾಜಕೀಯವಾಗಿ ಬೆಳೆಯವದನ್ನು ಸಹಿಸದೆ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಇಂದು ತಮ್ಮ ಮಗನನ್ನು ನರಗುಂದ ಕ್ಷೇತ್ರದಲ್ಲಿ ಬೆಳಸುತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಗುರುಪಾದಪ್ಪ ಕುರಹಟ್ಟಿ, ರಾಜು ಕಲಾಲ, ಪ್ರವೀಣ ಯಾವಗಲ್, ನೀಲಪ್ಪ ಗುಡದನ್ನವರ, ಎಂ.ಎಸ್.ಪಾಟೀಲ, ಮಾನೆ, ರವಿ ಯರಗಟ್ಟಿ, ಎಂ.ಬಿ.ಅರಹುಣಸಿ, ಜಗದೇಶೆ ಕಗದಾಳ, ಮಲ್ಲೇಶ ಅಬ್ಬಗೇರಿ, ವಿಷ್ಟು ಸಾಠೆ, ಪ್ರಕಾಶ ಹಡಗಲಿ ಇದ್ದರು.