Home » News » ಬಿಜೆಪಿ ಶಿರಹಟ್ಟಿ ಮಂಡಳದ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಮೆನಸಿನಕಾಯಿ ನೇಮಕ…!

ಬಿಜೆಪಿ ಶಿರಹಟ್ಟಿ ಮಂಡಳದ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಮೆನಸಿನಕಾಯಿ ನೇಮಕ…!

by CityXPress
0 comments

ಗದಗ : ಭಾರತೀಯ ಜನತಾ ಪಾರ್ಟಿಯ ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಿರಹಟ್ಟಿ ಮಂಡಳದ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಯುವ ಮುಖಂಡ ಗಂಗಾಧರ ಈರಪ್ಪ ಮೇನಸಿನಕಾಯಿ ನೇಮಕಗೊಂಡಿದ್ದಾರೆ.

ವರದಿ : ಪರಮೇಶ ಎಸ್ ಲಮಾಣಿ.

ಬಿಜೆಪಿ ರಾಜ್ಯಾಧ್ಯಕ್ಷ ವೀಜೇಯಂದ್ರ ಅವರ ಆದೇಶದ ಮೇರೆಗೆ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ ( ರಾಜು) ಕುರಡಗಿ ನೇಮಕ ಮಾಡಿ ಆದೇಶ ಹೋರಡಿಸಿದ್ದಾರೆ.

ಪತ್ರಿಕೆಯೊಂದಿಗೆ ಶಾಸಕರ ಡಾ.ಚಂದ್ರು ಲಮಾಣಿ ಮಾತನಾಡಿ ದೇಶದಲ್ಲಿಪಕ್ಷ ಉತ್ತಮ ಆಡಳಿತ ನೀಡುವ ಮೂಲಕ ಪ್ರಜೆಗಳ ಮನ ಗೆದ್ದಿದೆ, ಪ್ರಧಾನಿ ಮೋದಿ ಅವರು ದೇಶಕ್ಕಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಗತ್ತಿಗೆ ಮಾದರಿಯಾಗಿವೆ. ಇಂತಹ ಬಲಿಷ್ಠ ಹಾಗೂ ಜನಪರ ಪಕ್ಷವನ್ನು ತಾಲೂಕು ಹಂತದಲ್ಲಿ ಮತ್ತಷ್ಟು ಸದೃಢ ಗೊಳಿಸುವಲ್ಲಿ ಗಂಗಾಧರ ಶ್ರಮಿಸಲಿದ್ದಾರೆ ಎಂಬ ಅಚಲ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb