ಬೆಂಗಳೂರು, ಆ. 22 : ಕರ್ನಾಟಕ ಸರ್ಕಾರವು ಇಂದು ಹೊರಡಿಸಿರುವ ಅಧಿಸೂಚನೆಯ ಮೂಲಕ ರಾಜ್ಯದ ಐಎಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಗಳನ್ನು ಮಾಡಿದೆ.
ಈ ಹಿನ್ನೆಲೆಯಲ್ಲಿ, ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಭರತ್ ಎಸ್, ಅವರನ್ನು ತಕ್ಷಣದಿಂದಲೇ ವರ್ಗಾವಣೆ ಮಾಡಿ, ಬೆಂಗಳೂರಿನ ಪ್ರೌಢಶಿಕ್ಷಣ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಸದ್ಯ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿರುವ ಶ್ರೀ ಸಿ.ಎನ್. ಶ್ರೀಧರ ಅವರಿಗೆ ತಾತ್ಕಾಲಿಕವಾಗಿ ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ (CEO) ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಯಲ್ಲಿದ್ದು ಮುಂದಿನ ಸೂಚನೆವರೆಗೂ ಮುಂದುವರಿಯಲಿದೆ.
ಈ ( ಬೆಂಗಳೂರಿನ ಪ್ರೌಢಶಿಕ್ಷಣ ಇಲಾಖೆ)
ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ವಿದ್ಯಾಕುಮಾರಿ ಕೆ. ಅವರನ್ನು ನಿರ್ವಹಣಾ ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಗಿದೆ.
ಈ ಸಂಬಂಧವಾಗಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿ. ಮಹಾಂತೇಶ್, ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ಬದಲಾವಣೆಯ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ತಾತ್ಕಾಲಿಕವಾಗಿ ಗದಗ ಜಿಲ್ಲಾಧಿಕಾರಿಗಳಾಗಿರುವ ಶ್ರೀ ಶ್ರೀಧರ ಅವರು ಮುಖ್ಯಸ್ಥರಾಗಲಿದ್ದು, ಬೆಂಗಳೂರಿನ ಪ್ರೌಢಶಿಕ್ಷಣ ಇಲಾಖೆಗೆ ಭರತ್ ಎಸ್. ಹೊಸ ಉತ್ಸಾಹ ಮತ್ತು ಕಾರ್ಯನಿರ್ವಹಣೆಯೊಂದಿಗೆ ಜವಾಬ್ದಾರಿ ಹೊತ್ತಿದ್ದಾರೆ.