Friday, April 25, 2025
Homeರಾಜ್ಯಗದಗ: ನವ ವಿವಾಹಿತೆಯ ನಿಗೂಢ ಸಾವಿಗೆ ಟ್ವಿಸ್ಟ್ ..! ಡೆತ್ ನೋಟ್ ಹೇಳಿತು ಸಾವಿನ ಸಿಕ್ರೇಟ್..!

ಗದಗ: ನವ ವಿವಾಹಿತೆಯ ನಿಗೂಢ ಸಾವಿಗೆ ಟ್ವಿಸ್ಟ್ ..! ಡೆತ್ ನೋಟ್ ಹೇಳಿತು ಸಾವಿನ ಸಿಕ್ರೇಟ್..!

ಗದಗ (ಬೆಟಗೇರಿ):
ಗದಗ ಜಿಲ್ಲೆಯ ಶರಣಬಸವೇಶ್ವರ ನಗರದಲ್ಲಿ ಬೆಳಿಗ್ಗೆ ನಡೆದ, ನವ ವಿವಾಹಿತೆಯ ಆತ್ಮಹತ್ಯೆ ಪ್ರಕರಣವು ಇದೀಗ ಡೆತ್ ನೋಟ್ ದಿಂದ ಟ್ವಿಸ್ಟ್ ಪಡೆದುಕೊಂಡಿದೆ. ನಾಲ್ಕು ತಿಂಗಳ ಹಿಂದಷ್ಟೇ ಗದಗದ ಅಮರೇಶ ಅಯ್ಯನಗೌಡ್ರು ಎಂಬಾತನೊಂದಿಗೆ ಮದುವೆಯಾಗಿದ್ದ ಬಳ್ಳಾರಿ ಮೂಲದ ಪೂಜಾ, ಬೆಳಿಗ್ಗೆ ಮನೆಯ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೂಜಾ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಡೆತ್ ನೋಟ್ ಪತ್ತೆಯಾದ ಕ್ಷಣದಲ್ಲಿ, ಸ್ಥಳದಲ್ಲಿದ್ದ ಪೂಜಾಳ ಪೋಷಕರು ಆಕ್ರೋಶದ ಜ್ವಾಲೆಯಲ್ಲಿ ಭಾವ ವೀರನಗೌಡನನ್ನು ಎಳೆದಾಡಿ ಹಲ್ಲೆಗೆ ಮುಂದಾದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಬೆಟಗೇರಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಭಾವನನ್ನು ರಕ್ಷಿಸಿದ್ದಾರೆ.

ಪೂಜಾಳ ಪೋಷಕರ ಪ್ರಕಾರ, ವಿವಾಹದ ನಂತರ ಅವಳು ನಿರಂತರವಾಗಿ ಅತ್ತೆ ಮತ್ತು ಭಾವನ ಕಿರುಕುಳ ಅನುಭವಿಸುತ್ತಿದ್ದಳು. ಇದೇ ದಿಕ್ಕಿನಲ್ಲಿ ಸಾಕಷ್ಟು ಬಾರಿ ಬೇಸರ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.

ಈ ವೇಳೆ “ಈ ಇಬ್ಬರ (ಅತ್ತೆ-ಮಾವ) ಕಿರುಕುಳ ತಾಳದೇ ನನ್ನ ಮಗಳು ಪ್ರಾಣಬಿಟ್ಟಿದ್ದಾಳೆ” ಎಂದು ಪೋಷಕರು ಕಿಡಿಕಾರಿದ್ದಾರೆ. ಸ್ಥಳೀಯ ಪೊಲೀಸರ ಎಚ್ಚರಿಕೆಯಿಂದ ಸ್ಥಿತಿಗತಿಯು ತಾತ್ಕಾಲಿಕವಾಗಿ ನಿಭಾಯಿಸಲ್ಪಟ್ಟರೂ, ಪ್ರಕರಣದ ನಿಜ ಸ್ಥಿತಿಗೆ ತೀವ್ರ ತನಿಖೆ ಆರಂಭಿಸಲಾಗಿದೆ.

ಬೆಟಗೇರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಡೆತ್ ನೋಟ್‌ನ ಮೂಲ, ಬೆನ್ನಟ್ಟಿ ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಕುಟುಂಬಸ್ಥರ ಹೇಳಿಕೆಗಳ ಪ್ರಕಾರ, ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಇಂದು (ಏಪ್ರೀಲ-15) ಬೆಳಿಗ್ಗೆಯಷ್ಟೇ ಗದಗ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ನವ ವಿವಾಹಿತೆಯೊಬ್ಬಳ ಅನುಮಾನಾಸ್ಪದ ಸಾವಾಗಿತ್ತು, ಬಳ್ಳಾರಿ ಮೂಲದ ಪೂಜಾ ಅಯ್ಯನಗೌಡ್ರು ಎಂಬ ಮಹಿಳೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಮೃತ ಪೂಜಾ ನಾಲ್ಕು ತಿಂಗಳ ಹಿಂದಷ್ಟೆ ಗದಗನ ಶರಣಬಸವೇಶ್ವರ ನಗರದ ಅಮರೇಶ ಎಂಬಾತನೊಂದಿಗೆ ವಿವಾಹವಾಗಿದ್ದರು. ಇಂದು ಮುಂಜಾನೆಯಷ್ಟೇ ತಮ್ಮ ಕುಟುಂಬಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಪೂಜಾ, ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವುದು ಈ ಘಟನೆಗೆ ಮತ್ತಷ್ಟು ಗಂಭೀರತೆಯನ್ನು ನೀಡಿತ್ತು.

ಮನೆಯ ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದರ ಹಿನ್ನೆಲೆ ಕುರಿತು ಮೃತಳ ಪೋಷಕರು ಗಂಭೀರ ಆರೋಪಗಳನ್ನು ಹೊರ ಹಾಕಿ, ಅತ್ತೆ ಶಶಿಕಲಾ ಹಾಗೂ ಮಾವನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

“ಪ್ರತಿಯೊಂದು ವಿಷಯಕ್ಕೂ ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದಳು. ಬೇಸರದಿಂದ ಬಂದು ಹೋಗುತ್ತೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದಳು” ಎಂಬ ಪೋಷಕರ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿತ್ತು.

“ಇವರ ಕಿರುಕುಳದಿಂದಲೇ ನಮ್ಮ ಮಗಳು ತೊಂದರೆ ಅನುಭವಿಸಿ ಕೊನೆಯಾಗಿ ಕೊಲೆಗೀಡಾದಳು” ಎಂಬ ಗಂಭೀರ ಆರೋಪ ಮಾಡಿದ್ದರು.ಇದೇ ವೇಳೆ ಆಕ್ರೋಶಗೊಂಡ ಮೃತ ಪೂಜಾಳ ಪೋಷಕರು, ಪತಿಯ ಅಣ್ಣನ ಮೇಲೂ ಹಲ್ಲೆ ಮಾಡಲು ಮುಂದಾಗಿ, ಪೊಲೀಸರ ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಿದ್ದರು.

ಇದಾದ ಕೇಲವೆ ಸಮಯದಲ್ಲಿ, ಮನೆಯಲ್ಲಿನ ಬೀರುವಿನಲ್ಲಿದ್ದ, ಡೆತ್ ನೋಟ್ ಇಡೀ ಘಟನೆಗೆ ಸಾಕ್ಷಿಯಾಗಿತ್ತು. ಪೂಜಾಳ ಪೋಷಕರು ಆರೋಪಿಸಿದಂತೆ, ಅತ್ತೆ ಮಾವನ ವಿರುದ್ಧ ಕಠೋರ ನಿರ್ಧಾರ ತೆಗೆದುಕೊಂಡಿದ್ದಲ್ಲದೇ, ತನ್ನ ಜೀವವನ್ನೇ ಬಲಿ ಕೊಟ್ಟಿದ್ದಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments