ಗದಗ, ಏಪ್ರಿಲ್ 26:ಸನ್ 2025-27ನೇ ಸಾಲಿನ ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು,ಮತದಾನ ನಂತರ ಮತ ಎಣಿಕೆ ಪ್ರಕ್ರಿಯೆ ಜರುಗಿದ್ದು, ಫಲಿತಾಂಶವನ್ನು ಚುನಾವಣಾಧಿಕಾರಿ ಎಂ.ಎ. ಬಿಜಾಪೂರ ಅವರು ಘೋಷಿಸಿದ್ದಾರೆ.
ಅಧ್ಯಕ್ಷ ಹುದ್ದೆಗೆ ರಾಜಶೇಖರ್ ಗಂಗಪ್ಪ ಕಲ್ಲೂರ ಅವರು 238 ಮತಗಳನ್ನು ಪಡೆದು ವಿಜೇತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮುದಕಪ್ಪ ಅಂದಪ್ಪ ಸಂಗನಾಳ ಅವರು 243 ಮತಗಳನ್ನು ಪಡೆದು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಅಯ್ಯಪ್ಪ ನಾಯ್ಕರ್ 208 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಸಹಕಾರ್ಯದರ್ಶಿ ಹುದ್ದೆಗೆ ಚನ್ನಾರೆಡ್ಡಿ ಬಸವರಾಜ ಗೂಳರೆಡ್ಡಿ 160 ಮತಗಳನ್ನು ಪಡೆದು ಆಯ್ಕೆಯಾದರೆ, ಖಜಾಂಚಿ ಹುದ್ದೆಗೆ ಮೀಸಲಾದ ಮಹಿಳಾ ಸ್ಥಾನದಲ್ಲಿ ಶೈಲಜಾ ಬಸಯ್ಯ ಹಿರೇಮಠ ಅವರು 239 ಮತಗಳನ್ನು ಪಡೆದು ವಿಜೇತರಾದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಈ ಬಾರಿ ಸಂಘದ ಐದು ಪ್ರಮುಖ ಹುದ್ದೆಗಳಿಗಾಗಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾಗಿ ಎಂ.ಎಸ್. ರಾಮೇನಹಳ್ಳಿ, ಎಂ.ಬಿ. ಸಜ್ಜನರ, ಶ್ರೀಮತಿ ಪಿ.ಎಚ್. ಮಾನೆ, ಎ.ಎ. ಸೂಗೂರು ಮತ್ತು ಎಂ.ಎಸ್. ಹಾಳಕೇರಿ ಅವರು ನೆರವಾದರು.

ವಕೀಲರ ಸಂಘದ ಚುನಾವಣೆ ಶಾಂತಿಯುತ ಹಾಗೂ ಶಿಸ್ತುಬದ್ಧವಾಗಿ ನಡೆದಿದ್ದು, ಚುನಾವಣೆಯಲ್ಲಿ ವಿಜೇತರಾದ ಪದಾಧಿಕಾರಿಗಳು ಭವಿಷ್ಯದಲ್ಲಿ ಸಂಘದ ಅಭಿವೃದ್ಧಿಗೆ ತಮ್ಮ ಸಕಾರಾತ್ಮಕ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ.
