ಬೆಂಗಳೂರು: ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ ಸೇರಿದಂತೆ ಸರ್ಕಾರ ರಾಜ್ಯಪಾಲರ ಬಳಿ ಅಂಗೀಕಾರಕ್ಕೆಂದು ಕಳುಹಿಸಿದ್ದ, ನಾಲ್ಕು ವಿಧೆಯಕಗಳಿಗೆ ರಾಜ್ಯಪಾಲರು ಅಂಗೀಕಾರ ಹಾಕದೇ, ವಾಪಾಸ್ ಕಳುಹಿಸಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯಪಾಲರ ಅಂಗೀಕಾರಕ್ಕೆ ರಾಜ್ಯ ಸರ್ಕಾರ ಹಲವು ಮಸೂದೆಗಳನ್ನು ಕಳುಹಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲರು ನಾಲ್ಕು ವಿಧೆಯಕಗಳನ್ನ ತಮ್ಮ ಬಳಿ ಬಾಕಿ ಇಟ್ಟುಕೊಂಡು,ಇನ್ನುಳಿದ ನಾಲ್ಕು ವಿಧೆಯಕಗಳನ್ನ ವಾಪಾಸ್ ಕಳಿಸಿದೆ. ಹೀಗೆ ಅಂಕಿತ ಹಾಕದೆ ಕಳಿಸಿರುವ ರಾಜ್ಯಪಾಲರ ನಡೆಯ ವಿರುದ್ದ ಕಾನೂನು ಹೋರಾಟಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಇದರ ಬೆನ್ನಲ್ಲೆ, ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಮುಂದುವರೆದಿದ್ದು, ಮಸೂದೆಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಕ್ಕೆ, ಸರ್ಕಾರ ಹಲವು ಸಚಿವರು ಅಸಮಾಧಾನ ಹೊರಹಾಕಿದ್ದಾರೆ.
*ವಾಪಾಸ್ ಕಳುಹಿಸಿದ ನಾಲ್ಕು ವಿಧೇಯಕಗಳು*
1) ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ೨೦೨೪ ವಿಧೆಯಕ.
2) ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ ೨೦೨೪
3) ಕರ್ನಾಟಕ ಸಹಕಾರಿ ಸಮಿತಿಗಳ ತಿದ್ದುಪಡಿ ವಿಧೇಯಕ ೨೦೨೪.
4) ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ.
ಈ ನಾಲ್ಕು ವಿಧೇಯಕಗಳನ್ನು ಅಂಗೀಕರಿಸಿದೆ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಇದೀಗ ರಾಜ್ಯ ಸರ್ಕಾರ ರಾಜ್ಯಪಾಲರ ಈ ನಡೆಯಿಂದ ಆಕ್ರೋಶಗೊಂಡಿದ್ದು ಕಾನೂನಿನ ಮೂಲಕ ಹೋರಾಟ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.