ಗದಗ, ಮೇ 18:
ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಿನ್ನೆ ರಾತ್ರಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಗದಗ ಉಪ ತಹಶೀಲ್ದಾರ್ ಡಿ. ಟಿ. ವಾಲ್ಮೀಕಿ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(1)(ಡಿ) ಅನ್ವಯ, ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ್ ಅವರು ಈ ಅಮಾನತು ಆದೇಶ ಜಾರಿಗೆ ತಂದಿದ್ದಾರೆ.
ಘಟನೆಯ ಪ್ರಕಾರ, ಅಕ್ಷಯ್ ಬೊಳ್ಳೊಳ್ಳಿ ಎಂಬ ಯುವಕನ ಗೆಳೆಯನ ಬೈಕ್‌ಗೆ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದ ಘಟನೆ ಕಚೇರಿ ಸಮೀಪ ನಿನ್ನೆ ರಾತ್ರಿ ಸಂಭವಿಸಿತ್ತು. ಈ ಸಂಬಂಧ ಮಾಹಿತಿ ಕೇಳಲು ಅಕ್ಷಯ್ ಕಚೇರಿಗೆ ತೆರಳಿದ ವೇಳೆ, ಕಾರಿನ ಮಾಲೀಕ ಯಾರು ಎಂಬ ಪ್ರಶ್ನೆಗೆ ಕೆರಳಿದ ಉಪ ತಹಶೀಲ್ದಾರ್ ಹಾಗೂ ಕಾಂಗ್ರೆಸ್ ಮುಖಂಡ ವಿದ್ಯಾಧರ ದೊಡ್ಡಮನಿ ಅವರ ತಂಡ ಅಕ್ಷಯ್ ಮೇಲೆ ಕಚೇರಿಯೊಳಗೆ ಹಲ್ಲೆ ನಡೆಸಿದ್ದರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಹಲ್ಲೆ ವೇಳೆ ಕಚೇರಿಯಲ್ಲಿದ್ದ ಕುರ್ಚಿಯಿಂದ ಅಕ್ಷಯ್ ಮೇಲೆ ದೌರ್ಜನ್ಯ ನಡೆಸಿದರೆಂದು ಮೊಬೈಲ್ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಸಾಕ್ಷಿಯಾಗಿತ್ತು.
ಘಟನೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲಾ ಆಡಳಿತ ಹಾಗೂ ಪೊಲೀಸರ ವಿರುದ್ಧ ನಿಷ್ಕ್ರಿಯತೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಘಟನೆ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳ ನಡುವೆಯೇ ಇದೀಗ ಜಿಲ್ಲಾಧಿಕಾರಿಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಅಮಾನತು ಆದೇಶದಲ್ಲಿ, ವಾಲ್ಮೀಕಿ ಅವರು ವಿಚಾರಣೆಯನ್ನು ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಅಮಾನತು ಅವಧಿಯಲ್ಲಿ ಕೇಂದ್ರಸ್ಥಾನ ಬಿಡಬಾರದು ಹಾಗೂ ಪೂರ್ವಾನುಮತಿ ಇಲ್ಲದೆ ಯಾವುದೇ ಸ್ಥಾನಾಂತರವನ್ನೂ ಮಾಡಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ನಡುವೆ ಪ್ರಕರಣದ ತನಿಖೆ ಹಾಗೂ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ತಿಳಿಯಬೇಕಿದೆ..
