ನರೇಗಲ್ಲ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಧ್ಯಕ್ಷ ಉಫಾಧ್ಯಕ್ಷರ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಕೊರಂ ಕೊರತೆಯ ಕಾರಣ ಅವಿಶ್ವಾಸವನ್ನು ರದ್ದು ಮಾಡಿ, ಮತ್ತೇ ಹಾಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಮುಂದುವರೆಸಲಾಗಿದೆ.ಇದರಿಂದ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದವರಿಗೆ ಮುಖಭಂಗ ಅನುಭವಿಸುವಂತಾಗಿದೆ.
ಒಂದು ವರ್ಷದ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಚುನಾವಣೆ ಮಾಡಲಾಗಿತ್ತು. ಅವಿರೋಧ ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನ ಬಿಜೆಪಿ ಅಭ್ಯರ್ಥಿ ಗಂಗವ್ವ ಜಂಗಣ್ಣವರ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಲ್ಲವ್ವ ನೀಲಪ್ಪ ಮಾದರ ಒಲಿಯುವ ಮೂಲಕ ಬಿಜೆಪಿ ತೆಕ್ಕೆಗೆ ಒಲಿದಿತ್ತು. ವಿಫಲವಾದ ಕಾಂಗ್ರೆಸ್ ಮತ್ತೆ ನವಂಬರ್26 ರಂದು ಮತ್ತೆ ಅವಿಶ್ವಾಸ ಗೊತ್ತುವಳಿ ಮಾಡಲು ಮುಂದಾಗಿತ್ತು. ಅವಿಶ್ವಾಸದ ಗೊತ್ತುವಳಿಯಲ್ಲಿ ಕೊರಂ ಭರ್ತಿಮಾಡಲು ವಿಫಲವಾಗಿದ್ದಕ್ಕೆ ಮತ್ತೆ ಗಂಗವ್ವ ದ್ಯಾಮಪ್ಪ ಜಂಗಣ್ಣವರ ಅಧ್ಯಕ್ಷೆಯಾಗಿ, ಯಲ್ಲವ್ವ ಮಾದರ ಉಪಾಧ್ಯಕ್ಷೆಯಾಗಿ ಮುಂದುವರೆದಿದ್ದಾರೆ.
ಇನ್ನು ಮತ್ತೆ ಬಿಜೆಪಿ ಅಧಿಕಾರ ಮುಂದುವರೆಸಿದ್ದಕ್ಕೆ, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವದರ ಮೂಲಕ ಗೆಲುವಿನ ಸಂಭ್ರಮ ಆಚರಿಸಿದರು. ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಇವತ್ತಿನ ದಿನ ಪಂಚಾಯತಿ ಅವಿಶ್ವಾಸ ಗೊತ್ತುವಳಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಜಂಗಣ್ಣವರ ಅವಿಶ್ವಾಸ ಗೊತ್ತುವಳಿಯಲ್ಲಿ ಮತ್ತೆ ಗೆಲುವನ್ನು ಸಾಧಿಸಿದ್ದಾರೆ ನಮ್ಮ ಪಕ್ಷ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಉಪಾಧ್ಯಕ್ಷೆ ಅವಿಶ್ವಾಸ ಗೊತ್ತುವಳಿ ಆಗಿದೆ. ಈ ಅವಿಶ್ವಾಸ ಗೊತ್ತುವಳಿಯಿಂದ ಗ್ರಾಮದಲ್ಲಿ ಅಭಿವೃದ್ಧಿ, ಕುಂಠಿತ ಆಗುತ್ತದೆ. ಹಾಗಾಗಿ ಪದೆ ಪದೆ ಪಕ್ಷದ ಅವಿಶ್ವಾಸ ಮಾಡುವದರಿಂದ ಗ್ರಾಮಕ್ಕೂ ಕೂಡ ಕೆಟ್ಟ ಹೆಸರು ಬರುವ ಸಾಧ್ಯತೆ. ಆದ್ದರಿಂದ, ಮುಂಬರುವ ದಿನಗಳಲ್ಲಾದರೂ ನಮ್ಮ ಜೊತೆಗೆ ವಿರೋಧ ಪಕ್ಷದವರು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ಹೊರತು ಪದೇ ಪದೇ ಅವಿಶ್ವಾಸ ಗೊತ್ತುವಳಿ ಮಾಡುವದರಿಂದ ಗ್ರಾಮ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಮುಖಂಡ ಶಿವನಾಗಪ್ಪ ದೊಡ್ಡಮೇಟಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಅವಿಶ್ವಾಸ ಪಂಚಾಯಿತಿ ಯಾವುದಾದ್ರೂ ಇದ್ರೆ ಅದು ನಮ್ಮ ಜಕ್ಕಲಿ ಗ್ರಾಮ ಪಂಚಾಯಿತಿ ಎಂದು ಹಣೆಪಟ್ಟಿ ಪಡೆದುಕೊಂಡಿದೆ. ರಾಜಕೀಯ ಹಾಗೂ ಆಡಳಿತದ ಗದ್ದುಗೆ ಏರುವುದರಲ್ಲಿಯೇ ಸಮಯ ಹಾಳು ಮಾಡುತ್ತಿದೆ. ಅದರ ಬದಲು ಸರ್ವ ಸದಸ್ಯರು ಸೇರಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಡೆಸಿದರೆ ಅದೇ ಒಂದು ದೊಡ್ಡ ಗೆಲವು ಎಂದರು.
ಚುಣಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಕಾರ್ಯನಿರ್ವಹಿಸಿದರು. ಶಿವಪ್ಪ ಕೆಳಗೇಡಿ. ಶೇಖಣ್ಣ ಮಾರನಬಸರಿ, ಶಿವನಗೌಡ ಪಾಟೀಲ, ನಾಗರಾಜ ಕಡಗದ, ಶರಣಪ್ಪ ಕೋರಿ, ಚನ್ನಬಸಪ್ಪ ಸೂಡಿ, ಮಂಜು ವಾಲಿ, ಬಸವರಾಜ ರಂಗಣ್ಣವರ, ಮಂಜುನಾಥ್ ಪಲ್ಲೆದ, ಮಲ್ಲಪ್ಪ ಪಲ್ಲೇದ ಸೇರಿದಂತೆ ಇತರರಿದ್ದರು.