ಮುಂಡರಗಿ: ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ನಿಧನರಾದ ಪ್ರಯುಕ್ತ
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬೃಂದಾವನ ವೃತ್ತದಲ್ಲಿ ಸ್ಥಳಿಯ ಮುಖಂಡರೆಲ್ಲರೂ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈ ಎನ್ ಗೌಡರ, ದೇಶದ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ರವರು ಶ್ರೇಷ್ಠ ಆರ್ಥಿಕ ತಜ್ಞರಾಗಿ ದೇಶದಲ್ಲಿ ಉದಾರಿಕರಣ,ಖಾಸಗಿಕರಣ, ಜಾಗತೀಕರಣ ಮಾಡುವಂತಹ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟವರು. ಆ ಮೂಲಕ ಪ್ರಪಂಚದಲ್ಲಿಯೇ ಇವತ್ತು ಭಾರತ ಆರ್ಥಿಕ ಸ್ಥಿರತೆಯನ್ನು ಕಾಣಲು ಸಾಧ್ಯವಾಗಿದೆ. ಅಂತಹ ಒಬ್ಬ ಮಹಾನ್ ಚೇತನ ಇಂದು ನಮ್ಮನ್ನೆಲ್ಲ ಅಗಲಿದ್ದು ಈ ನಾಡು ಇಂದು ಬಡವಾಗಿದೆ. ಭಗವಂತನು ಇವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಹೇಳಿದರು.
ಇದೇ ವೇಳೆ ಮೌನಾಚರಣೆ ಮಾಡುವ ಮೂಲಕ ಹಲವು ಮುಖಂಡರು ಮನಮೋಹನಸಿಂಗ್ ಅವರ ಜೀವನ ಸಾಧನೆ ಕುರಿತು ಮಾತನಾಡಿ, ಸಂತಾಪ ಸೂಚಿಸಿದರು.
ಈ ವೇಳೆ, ಮಾಜಿ ಸೈನಿಕರಾದ ವೆಂಕಟೇಶ್ ಗುಗ್ಗರಿ,ಎ.ಕೆ.ಬೆಲ್ಲದ, ಕೊಟ್ರೇಶ ಅಂಗಡಿ, ಶೇಖಪ್ಪ ಜುಟ್ಲನ್ನವರ್. ರುದ್ರಪ್ಪ ಬನ್ನಿಕೊಪ್ಪ, ಅಡಿವೆಪ್ಪ ಚಲವಾದಿ, ಡಿ.ಜಿ ಪೂಜಾರ್, ಧ್ರುವ ಕುಮಾರ್ ಹೂಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.