ಗದಗ(ಲಕ್ಷೇಶ್ವರ): ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಹಿಂದು ದೇವರ ಚಿತ್ರಗಳನ್ನೊಳಗೊಂಡ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದು, ಅವುಗಳನ್ನು ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿಯವರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಶ್ರೀ ಲಕ್ಷ್ಮೀ, ಶ್ರೀಕೃಷ್ಣ, ಶ್ರೀವಿಷ್ಣು, ಅಯ್ಯಪ್ಪಸ್ವಾಮಿ, ಶ್ರೀ ವೆಂಕಟೇಶ್ವರ ಇತ್ಯಾದಿ ದೇವರ ಚಿತ್ರ ಮತ್ತು ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟ್ಗಳ ಮೇಲಿನ ದೇವರ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ. ಜನರು ತುಳಿದಾಡುತ್ತಾರೆ.
ವರದಿ: ಪರಮೇಶ ಎಸ್ ಲಮಾಣಿ
ಕಸದ ಬುಟ್ಟಿಹಾಗೂ ಚರಂಡಿಯಲ್ಲಿ ಬೀಳುವುದು ಕಾಣುತ್ತದೆ. ಇದು ಹಿಂದು ದೇವರುಗಳಿಗೆ ಮಾಡುವ ಅಪಮಾನವಾಗಿದ್ದು, ಮತ್ತು ರಾಷ್ಟ್ರಪುರುಷರಿಗೆ ಅಗೌರವವಾಗುತ್ತದೆ.
ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ಮೇಲೆ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಿದೆ. ಹೀಗಾಗಿ, ರಾಜ್ಯದಲ್ಲಿಯೂ ನಿಷೇಧ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂದರ್ಭದಲ್ಲಿ ಈರಣ್ಣ ಪೂಜಾರ, ಯಲ್ಲಪ್ಪಗೌಡ ಪಾಟೀಲ, ದುಂಡಪ್ಪ ಸವಣೂರು, ಬಸವರಾಜ ಆಲೂರು, ಕಿರಣ ಗಾಣಿಗೇರ, ಎಂ.ಎನ್ ಬಾಡಗಿ, ಅಮಿತ ಗುಡಗೇರಿ, ಸೋಮು ನರೇಗಲ್, ಬಾಳಪ್ಪ ಗೋಸಾವಿ, ನಿಖಿಲ ಗೊಸಾವಿ, ನಾಗರಾಜ ಸೂರಣಗಿ, ರಾಜು ಗೋಸಾವಿ, ಗಣೇಶ ಗೋಸಾವಿ, ಪ್ರಮೋದ ಹೊನ್ನಪ್ಪನವರ, ಸುಮಂಗಲಾ ಕುಂಬಾರ, ಲಕ್ಷ್ಮೀ ಇತರರು ಇದ್ದರು.
