ನರಗುಂದ:ಪಟ್ಟಣದ ಕೋರಿ ಕಾಂಪ್ಲೆಕ್ಸನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕನ ಕೃಷಿ ಅಭಿವೃದ್ಧಿ ಶಾಖೆ ಕಟ್ಟಡದಲ್ಲಿ ಬುಧವಾರ ರಾತ್ರಿ 8-00 ಗಂಟೆಗೆ ಶಾರ್ಟ್ ಸರ್ಕ್ಯೂಟ್ ದಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿಗೆ ಬ್ಯಾಂಕನಲ್ಲಿನ ಸ್ಟೇಷನರಿ ಸಾಮಗ್ರಿಗಳು, ಕೆಲವು ದಾಖಲಾತಿಗಳು ಹಾಗೂ ಇತರೇ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ 8 ಗಂಟೆಗೆ ಬ್ಯಾಂಕನಲ್ಲಿನ ಸೈರನ್ ಶಬ್ದ ಪ್ರಾರಂಭಗೊಂಡಿದೆ. ಮಾಹಿತಿ ತಿಳಿದ ಬ್ಯಾಂಕ ಸಿಬ್ಬಂದಿಗಳು ಬ್ಯಾಂಕಗೆ ಆಗಮಿಸಿ, ಬಾಗಿಲು ತೆಗೆದಾಗ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳ ಇಲಾಖೆಗೆ ತಿಳಿಸಿದಾಗ, ಬೆಂಕಿ ನಂದಿಸಿದ್ದಾರೆ.

ಸ್ಥಳದಲ್ಲಿ ಬ್ಯಾಂಕ್ ವ್ಯವಸ್ಥಾಪಕ ರಾಕೇಶ ಕುಮಾರ ಹಾಗೂ ಸಿಬ್ಬಂದಿ, ಸಿಪಿಐ ಮಂಜುನಾಥ ನಡುವಿನಮನಿ ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ರು.