ಗದಗ: ಗದಗ ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿಯಿರುವ 30 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡಿರುವ ಮೆರಿಟ್ ಪಟ್ಟಿಯಲ್ಲಿ ( SC_PH-01 ಹುದ್ದೆಯ ಮೀಸಲಾತಿಗೆ ಅರ್ಹ ಅಭ್ಯರ್ಥಿ ಲಭ್ಯವಿಲ್ಲದೇ ಇರುವುದರಿಂದ ಇನ್ನುಳಿದ 29 ಹುದ್ದೆಗಳಿಗೆ 1:3 ಅನುಪಾತದನ್ವಯ ಮೂಲ ದಾಖಲಾತಿ ಪರಿಶೀಲನೆಗಾಗಿ 87 ಅಭ್ಯರ್ಥಿಗಳ ಪಟ್ಟಿಯನ್ನು ಗದಗ ಜಿಲ್ಲೆಯ ಅಧಿಕೃತ ವೆಬ್ ಸೈಟ್ http://www.gadag.nic.in ರಲ್ಲಿ ಪ್ರಕಟಿಸಲಾಗಿದೆ.
ಗದಗ ಜಿಲ್ಲೆಯ ಅಧಿಕೃತ ವೆಬ್ ಸೈಟ್ http://www.gadag.nic.in ರಲ್ಲಿ ಗದಗ ಜಿಲ್ಲೆಯ ಕಂದಾಯ ಘಟಕದ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಅಂತಿಮ ಹೆಚ್ಚುವರಿ ಪಟ್ಟಿಯನ್ನು ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಒಂದು ವೇಳೆ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸೇವೆಗೆ ಹಾಜರಾಗದಿದ್ದ ಪಕ್ಷದಲ್ಲಿ ಮಾತ್ರ ಹೆಚ್ಚುವರಿ ಅಂತಿಮ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು.
ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಂಬಂಧಿಸಿದ ಮೀಸಲಾತಿಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಜನೆವರಿ 29 ರೊಳಗಾಗಿ ತಮ್ಮ ಮೂಲ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ಗದಗ ಜಿಲ್ಲೆ, ಗದಗ ಇಲ್ಲಿ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.
ಸಂಬಂಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ / ತಪ್ಪಿದಲ್ಲಿ ಹೆಚ್ಚುವರಿ ಅಂತಿಮ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಪರಿಗಣಿಸಿ ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗುವುದು. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪ್ರಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಗದಗ ಇವರು ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.