ಮುಂಡರಗಿ: ಸಂಜೀವಿನಿ ಒಕ್ಕೂಟದ ಮೂಲಕ ಖರೀದಿ ಮಾಡಿದ ಕಡಲೆ ಬಾಕಿ ಹಣವನ್ನ ನೀಡುವಂತೆ ಒತ್ತಾಯಿಸಿ ಗದಗ ಜಿಲ್ಲೆ ಮುಂಡರಗಿ ತಾಲೂಕು ಪಂಚಾಯತ ಎದುರು ರೈತರು ಶಾಂತಿಯುತ ಪ್ರತಿಭಟನೆ ನಡೆಸಿದರು.
ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಸುಮಾರು 62 ಕ್ಕೂ ಹೆಚ್ಚು ರೈತರಿಂದ ಕಳೆದ ವರ್ಷ ಸಂಜಿವಿನಿ ಒಕ್ಕೂಟದ ಮೂಲಕ ಕರಿಗಡಲೆ ಖರಿದಿಸಿದ್ದಾರೆ. ಆದರೆ ಒಂದು ವರ್ಷ ಗತಿಸಿದರೂ ಈವರೆಗೂ ಬಾಕಿ ಹಣ ಪಾವತಿಸಿಲ್ಲ.ಬಡರೈತರ ಸುಮಾರು 70 ಲಕ್ಷ ರೂ.ಹಣ ಬಾಕಿ ಉಳಿಸಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ಅರ್ಧದಷ್ಟು ಹಣವನ್ನು ನೀಡಿದ್ದು,ಇನ್ನೂ ಅರ್ಧ ಹಣ ಬಾಕಿ ಇದೆ. ಹಣ ನೀಡದೆ ರೈತರ ಜೊತೆ ಸಂಜೀವಿನಿ ಒಕ್ಕೂಟ ಚೆಲ್ಲಾಟವಾಡುತ್ತಿದೆ. ಸರಿಯಾಗಿ ಸ್ಪಂದಿಸದೇ ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ಉತ್ತರಿಸುತ್ತಿದ್ದಾರೆ.ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ರೈತರಿಗೆಲ್ಲ ಬರಸಿಡಿಲು ಬಡಿದಂತಾಗಿದ್ದು, ಸಮಸ್ಯೆ ಸರಿಪಡಿಸಿ ಬಾಕಿ ಇರುವ ಹಣವನ್ನ ನೀಡಬೇಕು ಎಂದು ಹಳ್ಳಿಕೇರಿ ಗ್ರಾಮದ ರೈತರು ಆಗ್ರಹಿಸಿದರು.