522
ಗದಗ(ಲಕ್ಷ್ಮೇಶ್ವರ): ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಯ ಧರಣಿ ಸತ್ಯಾಗ್ರಹದಲ್ಲಿ ಆಮರಣ ಉಪವಾಸ ಕೈಗೊಂಡಿದ್ದ ಆದರಹಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರು ತ್ರೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.
ವರದಿ: ಪರಮೇಶ ಎಸ್ ಲಮಾಣಿ
ಸತತ ವೈದ್ಯಕೀಯ ಪರಿಕ್ಷೇಗೆ ಒಳಗಾಗಿದ್ದ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಬರುತ್ತಿದ್ದಂತೆ ಡಿವೈಎಸ್ಪಿ ಎಸ್ ಖಾದ್ರಿ ಅವರು ಕೂಡಲೇ ಅವರನ್ನು ಚಿಕಿತ್ಸೆಗೆ ಆ್ಯಂಬುಲೇನ್ಸ್ ಮೂಲಕ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದರು.