Home » News » ಮೆಕ್ಕೆಜೋಳ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಏಳನೇ  ದಿನದ ರೈತರ ಪ್ರತಿಭಟನೆ :

ಮೆಕ್ಕೆಜೋಳ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಏಳನೇ  ದಿನದ ರೈತರ ಪ್ರತಿಭಟನೆ :

by CityXPress
0 comments

ಸ್ಪಂದಿಸಿದ ಸರ್ಕಾರ, ಪ್ರತಿಭಟನಾಕಾರರ ವಿಜಯೋತ್ಸವ: ಉಪವಾಸ ಸತ್ಯಾಗ್ರಹ ಕೈಬಿಟ್ಟ ತಪಸ್ವಿ ಡಾ. ಕುಮಾರ ಮಹಾರಾಜರು…!

ಲಕ್ಷ್ಮೇಶ್ವರ(ಗದಗ) :  ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸಮಗ್ರ ರೈತ ಹೋರಾಟ ಸಮಿತಿ ಹಾಗೂ ವಿವಿಧ ರೈತಪರ ಹಾಗೂ ಕನ್ನಡ ಪರ ಸಂಘಟನೆಯ ಸಹಯೋಗದಲ್ಲಿ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಜಯ ದೊರಕಿದ್ದು ರೈತ ಸಂಭ್ರಮಿಸಿದ್ದಾರೆ.

ಕಳೆದ ೫ ದಿನಗಳಿಂದ  ಧರಣಿ ಸತ್ಯಾಗ್ರಹ ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆದರಹಳ್ಳಿ ಗ್ರಾಮದ ಗವಿಮಠ ಡಾ.ಕುಮಾರ ಮಹಾರಾಜರು ಗುರುವಾರ ಅಸ್ವಸ್ಥಗೊಂಡು ಆಸ್ಪತೆಗೆ ದಾಖಲಾಗಿದ್ದರು.

ವರದಿ : ಪರಮೇಶ ಎಸ್ ಲಮಾಣಿ

banner

ಶುಕ್ರವಾರ ಮದ್ಯಾಹ್ನ ಪಟ್ಟಣದ ಶಿಗ್ಲಿ ನಾಕಾ ಬಳಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರವರು ಆಗಮಿಸಿ,  ರೈತರನ್ನು ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಈಗಾಗಲೇ ಖರೀದಿ ಕೇಂದ್ರಗಳನ್ನು ಪ್ರಾರಂಬಿಸಲಾಗುವುದು ಎಂದು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದು ಬಹುತೇಕ ಸೋಮವಾರ ಅಥವಾ ಮಂಗಳವಾರ ಖರೀದಿ ಕೇಂದ್ರ ಪ್ರಾರಂಭಿಸಲು ಆದೇಶ ಹೊರಡಿಸುತ್ತಾರೆ, ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದ್ದು,  ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಿದರು.

ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ ಮಹಾರಾಜರನ್ನು ಅಂಬ್ಯಲೆನ್ಸ್ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು, ಆಮರಣ ಉಪವಾಸ ಕೈಗೊಂಡಿದ್ದ ಕುಮಾರ ಮಹಾರಾಜರು ಅಸ್ವಸ್ಥತೆಯಿಂದ ಆಸ್ಪತ್ರೆಯಲ್ಲಿದ್ದರೂ ಕೂಡಾ ಶ್ರೀಗಳು ಆಹಾರ ಸೇವಿಸಲು ಒಪ್ಪಿರಲಿಲ್ಲ, ಇದೀಗ ಜಿಲ್ಲಾಧಿಕಾರಿಗಳು ಸರಕಾರದ ನಿರ್ಣಯವನ್ನು ಶ್ರೀಗಳಿಗೆ ತಿಳಿಸಿ ಎಳನೀರನ್ನು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು.

ಅಲ್ಲದೆ ಅವರೊಂದಿಗೆ ಕಳೆದ ೬ ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪ್ರರ್ಣಾಜಿ ಖರಾಟೆ, ಬಸವರಾಜ ಬೆಂಡಿಗೇರಿಯವರು ಸಹ ಉಪವಾಸ ಸತ್ಯಾಗ್ರಹ ಕೈಬಿಟ್ಟರು.

ನಂತರ ರೈತರ ಮುಂಡರಾದ ಮಂಜುನಾಥ ಮಾಗಡಿ ಮತ್ತು ಹೋರಾಟಗಾರ ರವಿಕಾಂತ ಅಂಗಡಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದು ಖುಷಿಯ ವಿಚಾರ ನಮ್ಮ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವವರೆಗೂ ರೈತರ ಧರಣಿ ಸತ್ಯಾಗ್ರಹ ಮುಂದವರೆಯಲಾಗುವುದು ಎಂದು ಹೇಳಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರರು, ಪೋಲಿಸ್ ಅಧಿಕಾರಿಗಳು, ಇದ್ದರು.

ಮೆಕ್ಕೆಜೋಳ ಖರೀದಿ ಕೇಂದ್ರದ ನಿರ್ಧಾರ;ರೈತರ ಸಂಭ್ರಮಾಚರಣೆ:

ಕಳೆದ ಏಳು ದಿನಗಳಿಂದ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಬೆಂಬಲದಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಅಹೋ ರಾತ್ರಿ ಧರಣಿ ಸತ್ಯಾಗ್ರಹದ ಪ್ರತಿಭಟನಾಕಾರರಿಗೆ ಸರಕಾರದ ಸಿಹಿ ಸುದ್ದಿ ಶುಕ್ರವಾರ ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿತ್ತು.
ಶುಕ್ರವಾರ ಸುದ್ದಿ ತಿಳಿಯುತ್ತಿದ್ದಂತೆ ಶಿಗ್ಲಿ ನಾಕಾದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪಟಾಕಿ ಸಿಡಿಸಿ, ಪರಸ್ಪರ ಅಭಿನಂದಿಸಿ, ಸಿಹಿ ಹಂಚುವ ಮೂಲಕ ಸಂಬ್ರಮಾಚರಣೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿ ಸರ್ಕಾರ ಹತ್ತು ಲಕ್ಷ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಿದ್ದು ಇನ್ನು ಎರಡ್ಮೂರು ದಿನಗಳಲ್ಲಿ ಖರೀದಿ ಕೇಂದ್ರ ಆರಂಭ ಆಗಲಿವೆ, ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತು ಗದಗ ಜಿಲ್ಲೆಯಿಂದಲೆ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದು,  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರ ವಿಶೇಷ ಆಸಕ್ತಿ ಮತ್ತು ಸರಕಾರ ಮೇಲೆ ಒತ್ತಡ ಹೇರಿದ್ದು ಈ ಯೋಜನೆ ಜಾರಿಯಾಗುವಂತಾಗಿದೆ, ರೈತರು ಕಳೆದ ಒಂದು ವಾರದಿಂದ ಶಾಂತಿಯುತ ಹೋರಾಟ ನಡೆಸಿರುವದಕ್ಕೆ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಮಾತನಾಡಿ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕುಮಾರ ಮಹಾರಾಜರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅವರ ಪ್ರಾರ್ಥನೆ ಫಲವಾಗಿ ಇಂದು ಸರ್ಕಾರ ಖರೀದಿ ಕೇಂದ್ರ ತೆರೆಯಲು ಒಪ್ಪಿಗೆ ನೀಡಿದೆ. ಇದು ಸಮಸ್ತ ರೈತರಿಗೆ ಸಂದ ಜಯವಾಗಿದೆ, ಲಕ್ಷ್ಮೇಶ್ವರದ ರೈತರು ನಡೆಸಿದ ಹೋರಾಟದ ಫಲವಾಗಿ ಇಡಿ ರಾಜ್ಯದ ಜನರಿಗೆ ಅನೂಕೂಲವಾಗಿರುವದು ಸಂತೋಷವಾಗಿದೆ ಎಂದರು.  ಸ್ವಾಮೀಜಿ ಅವರೊಂದಿಗೆ ಉಪವಾಸ ಆಚರಿಸಿದ ಬಸಣ್ಣ ಬೆಂಡಿಗೇರಿ, ಪೂರ್ಣಾಜಿ ಖರಾಟೆ ಮಾತನಾಡಿ ರೈತರ ಬಗ್ಗೆ ಸರಕಾರಗಳು ಅಸಡ್ಡೆ ತೋರಿಸುವದು ಬೇಡ ಅವರ ಸಂಕಟ ಪರಿಹರಿಸುವ ಕಾರ್ಯ ಮಾಡಿ ಎಂದರು.

ವಕೀಲರಾದ ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ ಮಾತನಾಡಿ ಒಂದು ವಾರ ನಿರಂತರವಾಗಿ ರೈತರು ನಡೆಸಿದ ಧರಣಿ ಸತ್ಯಾಗ್ರಹ ಸರ್ಕಾರದ ಕಣ್ಣು ತೆರೆಸಿದೆ. ಅನ್ನದಾತ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಇದ್ದೇ ಇರುತ್ತದೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿಯಾಗಿದೆ, ಖರೀದಿ ಕೇಂದ್ರ ತೆರೆಯುವ ಕುರಿತು ಆದೇಶ ಪ್ರತಿ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಮತ್ತು ಪ್ರಥಮ ಖರೀದಿ ಕೇಂದ್ರ ಇದೇ ವೇದಿಕೆಯಲ್ಲಿಯೇ ಆರಂಭ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರ್ಗೇಶ, ಉಪವಿಭಾಗಾಧಿಕಾರಿ ಗಂಗಪ್ಪ, ಕುಂದಗೋಳದ ಬಸವಣ್ಣಜ್ಜ ಸ್ವಾಮೀಜಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ವೀರೇಂದ್ರಗೌಡ ಪಾಟೀಲ, ಟಾಕಪ್ಪ ಸಾತಪುತೆ, ಸೋಮಣ್ಣ ಡಾಣಗಲ್ಲ, ಸುರೇಶ ಹಟ್ಟಿ, ಅಭಯ ಜೈನ್, ದಾದಾಪೀರ್ ಮುಚ್ಛಾಲೆ, ಶಿವಾನಂದ ಲಿಂಗಶೆಟ್ಟಿ, ಗುರಪ್ಪ ಮುಳಗುಂದ, ವಿರುಪಾಕ್ಷಪ್ಪ ಮುದಕಣ್ಣವರ, ಪವನ ಬಂಕಾಪುರ, ರಾಮಣ್ಣ ಗೌರಿ, ಪ್ರಕಾಶ ಕೊಂಚಿಗೇರಿಮಠ, ನಾಮದೇವ ಮಾಂಡ್ರೆ, ಶಿವನಗೌಡ ಪಾಟೀಲ, ರಾಜಶೇಖರ ಕಾತರಕಿ, ಐ.ಎಂ.ಮುಳಗುಂದ, ನಿಂಗಪ್ಪ ಕಂಬಳಿ, ಭರಮವ್ವ ಬಸಾಪೂರ, ಸೋಮಣ್ಣ ಹೊಗೆಸೊಪ್ಪಿನ, ಮಂಜಪ್ಪ ಸ್ಮಣಗಾರ, ನಿಂಗಪ್ಪ ದೊಡ್ಡಮನಿ, ಎಸ್.ಬಿ.ಲಕ್ಷ್ಮೇಶ್ವರ, ಪರಮೇಶ ಶಿಗ್ಲಿ, ಬಸವರಾಜ ಕರೆಯತ್ತಿನ್ ಸೇರಿದಂತೆ ನೂರಾರು ಸಂಬ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ರೈತರಿಂದ ಬಾರ್ಕೋಲು ಚಳುವಳಿ ಮಾಡಿ ಸರಕಾರಕ್ಕೆ ಎಚ್ವರಿಕೆ..!

ಈ ಮೊದಲು ರೈತರು ಬಾರ್ಕೋಲು ಚಳವಳಿ ಮಾಡುವ ಮೂಲಕ ಕೊನೆಯ ಹೋರಾಟ ನಡೆಸಿದರು.
ಪಾಳಾ ಬಾದಾಮಿ ರಾಜ್ಯ ಹೆದ್ದಾರಿಯ ಮೇಲೆ ಬಾರ್ಕೋಲು ಚಳವಳಿ ನಡೆಸಿದ ರೈತರು ಬಾರ್ಕೋಲಿನಿಂದ ತಮ್ಮನ್ನು ತಾವೆ ದಂಡಿಸಿಕೊಂಡರು.

ಹೋರಾಟದ ಮುಂಚೂಣಿಯಲ್ಲಿರುವ ಮಂಜುನಾಥ ಮಾಗಡಿ, ಶರಣು ಗೋಡಿ, ನೀಲಪ್ಪ ಶರಶೂರಿ, ಮುಂತಾದವರು ಬಾರ್ಕೋಲಿನಿಂದ ಪೆಟ್ಟು ತಿಂದರು ಇದು ಸರ್ಕಾರಕ್ಕೆ ಅಪರೋಕ್ಷವಾಗಿ ರೈತ ಸಮುದಾಯ ಬೀದಿಗಿಳಿದರೆ ಯಾವ ಹಂತ ತಲುಪುತ್ತದೆ ಎಂಬುದನ್ನು ಪರೋಕ್ಷವಾಗಿ ಎಚ್ಚರಿಕೆ ನೀಡಿದಂತಿತ್ತು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb