ಗದಗ(ಲಕ್ಷ್ಮೇಶ್ವರ): ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ರೈತರು ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಹೋರಾಟದಲ್ಲಿ ಭಾಗವಹಿಸಿದ್ದ ಸತ್ಯಾಗ್ರಹಿ ಚಂದ್ರು ಮಾಗಡಿ ಅವರಿಗೆ ಎದೆ ನೋವು ಕಾಣಿಸಿಕೊಂಡು ತಲೆ ಸುತ್ತು ಬಂದಿದರಿಂದ ಅಸ್ತವ್ಯಸ್ತರಾದರು.
ಕೂಡಲೇ ವೇದಿಕೆಯಿಂದ ಅಂಬುಲೆನ್ಸ ಮೂಲಕ ಸಾಗಿಸಿ ಸ್ಥಳೀಯ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥ ಚಿಕಿತ್ಸೆ ನೀಡಲಾಯಿತು.
ವರದಿ: ಪರಮೇಶ ಎಸ್ ಲಮಾಣಿ
ಕಳೆದ ನಾಲ್ಕು ದಿನಗಳಿಂದ ಆದರಹಳ್ಳಿಯ ಡಾ.ಕುಮಾರ ಮಹಾರಾಜರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ರೈತರು ಉಪವಾಸ ಸತ್ಯಾಗ್ರಹದಲ್ಲಿ ತಮ್ಮನ್ನು ತಾವು ತೊಡಿಗಿಕೊಂಡಿದ್ದರಿಂದ ಚಂದ್ರು ಮಾಗಡಿ ಎಂಬಾತನಿಗೆ ಗಂಭೀರವಾಗಿ ತಲೆ ನೋವು ಹಾಗೂ ಎದೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವ ರೈತ ಅಸ್ತವ್ಯಸ್ತಗೊಳ್ಳುತ್ತಿದ್ದಂತೆಯೇ ಪ್ರತಿಭಟನಾ ನಿರತ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಮೇಲೆ ಕೇಳ ಕಾಲ ರಾಸ್ತಾ ರೋಕೋ ನಡೆಸಿದರು.
ಪ್ರತಿಭಟನಾಕಾರರನ್ನು ಪೋಲಿಸರು ಮನವಲಿಸಿ ಮತ್ತೆ ವೇದಿಕೆಯತ್ತ ಮೂಖಮಾಡುವಂತೆ ಮಾಡಿದರು.ಇನ್ನಾದರು ಸರಕಾರ ಎಚ್ಚೆತಕೊಳ್ಳುವುದೆ ಕಾದು ನೋಡಬೇಕಿದೆ.
ಇಂದಿನ ಸತ್ಯಾಗ್ರಹಕ್ಕೆ ಅನೇಕ ಸಂಘ ಸಂಸ್ಥೆಗಳು ನೈತಿಕ ಬೆಂಬಲ ನೀಡಿ ಹೋರಾಟಗಾರರನ್ನು ಬೆಂಬಲಿಸಿದರು.
ರವಿಕಾಂತ ಅಂಗಡಿ , ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಬಸವರಾಜ ಹಂಜಿ, ಪೂರ್ಣಾಜಿ ಕರಾಟೆ, ಸುಜಾತಾ ದೊಡ್ಡಮನಿ, ಶೇಖಣ್ಣ ಕಾಳೆ, ಚನ್ನಪ್ಪ ಶಣ್ಮುಖಿ, ಎಂ ಎಸ್ ದೊಡ್ಡಗೌಡರ್, ನೀಲಪ್ಪ ಸರಸೂರಿ, ನೀಲಪ್ಪ ಕರಜಕ್ಕನ್ನವರ್, ಅಂಬರೀಶ ತೆಂಬದಮನಿ, ಪ್ರಕಾಶ ಕೊಂಚಿಗೇರಿಮಠ ಹಾಗೂ ಸುತ್ತಮುತ್ತಲಿನ ರೈತರು, ವಿವಿಧ ಸಂಘಟನೆಯರು ಇದ್ದರು.
