ವರದಿ : ಪರಮೇಶ ಎಸ್ ಲಮಾಣಿ
ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿವಿಧ ರೈತಪರ ಸಂಘಟನೆಗಳು ಕನ್ನಡಪರ ಹೋರಾಟ ವೇದಿಕೆಗಳು ಸೇರಿದಂತೆ ಅನೇಕ ಸಂಘಟನೆಗಳ ಸಹಯೋಗದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಎತ್ತು ಚಕ್ಕಡಿಗಳ ಸಮೇತ ನೂರಾರು ರೈತರು ಶ್ರೀಸೋಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಮಾರ್ಗದೂದ್ದಕ್ಕೂ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ನಂತರ ಶಿಗ್ಲಿ ಕ್ರಾಸನಲ್ಲಿ ಅಹೋ ರಾತ್ರಿ ಧರಣಿ ಆರಂಭಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ ಅನೇಕ ಮುಖಂಡರು ರಾಜ್ಯ ಸರಕಾರದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬ ನಿತಿಯನ್ನು ಕೈಬಿಡದಿದ್ದರೆ ಸರಕಾರ ಗಂಭೀರ ಪ್ರಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ರವಿಕಾಂತ ಅಂಗಡಿ, ಹೊನ್ನಪ್ಪ ವಡ್ಡರ, ಮಂಜುನಾಥ ಮಾಗಡಿ ಮತ್ತು ಬಸವರಾಜ ಬೆಂಡಿಗೇರಿ ಮಾತನಾಡಿ ಒಂದು ವಾರದ ಹಿಂದೆಯೇ ತಹಶೀಲ್ದಾರರಿಗೆ ಮನವಿ ಕೊಟ್ಟಿದ್ದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದರು, ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ರೈತರ ತಾಳ್ಮೆ ಮತ್ತು ಸಹನೆಯನ್ನು ಕೆಣಕಬೇಡಿ ರೈತ ರೊಚ್ಚಿಗೆದ್ದರೆ ಮುಂದಾಗುವ ಯಾವುದೇ ಅನಾಹುತಕ್ಕೆ ನೇರವಾಗಿ ಸರಕಾರವೇ ಹೊಣೆ ಆಗುತ್ತೆ, ಜಿಲ್ಲಾಡಳಿತ ಜಿಲ್ಲಾ, ಉಸ್ತುವಾರಿ ಸಚಿವರು, ಶಾಸಕರು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ಉಗ್ರ ರೂಪಕ್ಕೆ ತಿರುಗುತ್ತದೆ.
ಬಿಜಾಪುರ, ಬಾಗಲಕೋಟ ಮತ್ತು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಬೇಡಿಕೆಗೆ ಮತ್ತು ಹೋರಾಟಕ್ಕೆ ಬೆಚ್ಚಿಬಿದ್ದ ಸರ್ಕಾರ ರೈತರ ಬೇಡಿಕೆಯನ್ನು ಇಡೇರಿಸಿತು. ಹಾಗಾದರೆ ನಾವು ಸಹ ಎಲ್ಲಾ ರಸ್ತೆಗಳನ್ನ ಬಂದು ಮಾಡಿ ಉಗ್ರವಾಗಿ ಹೋರಾಟ ಮಾಡುವುದಾಗಿ ಸರಕಾರಕ್ಕೆ ನೇರವಾಗಿ ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ ಕೆ.ರಾಘವೇಂದ್ರ ರಾವ್ , ಜಿಲ್ಲಾಧಿಕಾರಿಗಳು ಸರ್ಕಾರದ ಕಾರ್ಯದರ್ಶಿ ಅವರೊಡನೆ ಚರ್ಚಿಸಿದ್ದು, ಆದಷ್ಟು ಬೇಗ ಖರಿದ ಕೇಂದ್ರ ತೆರೆಯಲಾಗುತ್ತೆ ಎಂದು ರೈತರಿಗೆ ಮನವಲಿಸುವ ಕೆಲಸ ಮಾಡಿದರು, ಅಧಿಕಾರಿಯ ಮಾತನ್ನು ಕೇಳದ ರೈತರು ಈ ಕೂಡಲೇ ಖರಿದಿ ಕೇಂದ್ರ ತೆರೆದರೆ ಮಾತ್ರ ಪ್ರತಿಭಟನೆ ಹಿಮ್ಮಪಡೆಯಲಾಗುವುದು ಎಂದರು.
ಪ್ರತಿಭಟನಾ ಮೆರವಣಿಗೆಗಳಲ್ಲಿ ನಾಗರಾಜ ಚಿಂಚಲಿ,ನಿಲಪ್ಪ ಕರ್ಜಕಣ್ಣವರ,ನಾಗನಗೌಡ ಪಾಟೀಲ್,ಸೋಮಣ್ಣ ಡಾನಗಲ್,ದಾದಾಪೀರ ಮುಚಾಲೇ,ರಾಮರಾವ ವರ್ಣೀಕರ,ಅಶೋಕ ಬಟಕುರ್ಕಿ,ಎಂ.ಎಸ್.ಡೊಡ್ಡಗೌಡರ,ಟಾಕಪ್ಪ ಸಾತಪುತೆ,ಚನ್ನಪ್ಪ ಷಣ್ಮುಖಿ,ರಾಮಣ್ಣ ಗೌರಿ, ಹಂಪಣ್ಣ ಮುಳಗುಂದ,ಲಕ್ಷ್ಮಣ ಲಮಾಣಿ, ಶಿವಪುತ್ರಪ್ಪ ತಾರಿಕೊಪ್ಪ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
