ಗದಗ: ನಗರದ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ICSE ಮತ್ತು ಸ್ಟೇಟ್ ಬೋರ್ಡ್ ಪಠ್ಯಕ್ರಮದ ಎಸ್ ಎಸ್ ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡಗೆ ಸಮಾರಂಭ ಜರುಗಲಿದೆ.
ಇಂದು ಸಂಜೆ (6-2-2025) 4-30 ಕ್ಕೆ ಸಮಾರಂಭ ಜರುಗಲಿದ್ದು, ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಹಾಗೂ ಕೆಎಸ್ ಎಸ್ ಕಾಲೇಜಿನ ಪ್ರಾಚಾರ್ಯರಾದ ದುರುದುಂಡಿ ಬಾಬು ಗವಾನಿ ಅವರು ಆಗಮಿಸಲಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ವೈ.ಚಿಕ್ಕಟ್ಟಿ ಹಾಗೂ ಪ್ರಾಚಾರ್ಯರಾದ ಪ್ರೊ. ವಿನಯ್ ಚಿಕ್ಕಟ್ಟಿ ಮತ್ತು ಪ್ರಚಾರ್ಯರಾದ ಪ್ರೊ.ಬಿಪಿನ್ ಚಿಕ್ಕಟ್ಟಿ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
ಸಂಸ್ಥೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.