ಉಡುಪಿ: ಟೈಯರ್ ಗೆ ಗಾಳಿ ತುಂಬಿಸುವಾಗ ಬ್ಲಾಸ್ಟ್ ಆಗಿ ಯುವಕ ಸಿಡಿದು ಬಿದ್ದಿರೋ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಅಬ್ದುಲ್ ರಜೀದ್ ಅನ್ನೋ ಯುವಕನ ಕೈ ಕಟ್ ಆಗಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿರೋ ಯುವಕನನ್ನ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಶಾಲೆಯೊಂದರ ಬಸ್ಸಿನ ಟೈಯರ್ ಗೆ ಪ್ಯಾಚ್ ಹಾಕುವಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಗಾಳಿ ತುಂಬಲಾಗಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಗಾಳಿ ತುಂಬಿಸುತ್ತಿದ್ದ ರಜೀದ್ ಸ್ಥಳದಿಂದ ಅರೇಳು ಅಡಿ ಮೇಲಕ್ಕೆ ಸಿಡಿದು ಕೆಳಗೆ ಬಿದ್ದಿದ್ದಾನೆ.
ಸದ್ಯ ಯುವಕನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.