ಗದಗ:ಸಂವಿಧಾನ ಭಾರತೀಯರ ಹೃದಯವಿದ್ದಂತೆ.ಪ್ರತಿಯೊಬ್ಬರು ಸಂವಿಧಾನದಲ್ಲಿನ ಕಲಂಗಳನ್ನು, ಪರಿಶ್ಚೇದನಗಳನ್ನು ಅರಿತು ನಡೆದುಕೊಳ್ಳಬೇಕು ಅಂದಾಗ ನಾವು ಸಂವಿಧಾನವನ್ನು ಗೌರವಿಸಿದಂತೆ ಎಂದು ಸಂಸ್ಥೆಯ ಚೇರಮನ್ನರಾದ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ನಗರದ ಸ್ಥಳೀಯ ಸ್ಟುಡೆಂಟ್ಸ್ ಎಜುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ “ಸಂವಿಧಾನ ದಿನಾಚರಣೆ” ಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಕಾನೂನನ್ನು ಅರಿತು ನಡೆದುಕೊಂಡರೆ ಭಾರತೀಯರೆಲ್ಲರೂ ಸತ್ಪ್ರಜೆಗಳಾಗಲು ಸಾಧ್ಯ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ಬದುಕು ನಿರ್ಮಾಣವಾಗಬೇಕು, ಸಚ್ಛಾರಿತ್ರ್ಯ ಜೀವನಕ್ಕೆ ಸಂವಿಧಾನ ಅತ್ಯಗತ್ಯವೆಂದರು.
ನಿರ್ದೇಶಕರಾದ ಪ್ರೊ. ಉಡುಪಿ ದೇಶಪಾಂಡೆ ಮಾತನಾಡುತ್ತಾ, ಸಮಾನತೆ ಭಾವೈಕ್ಯತೆ, ಸಮತಾವಾದ ಭಾತೃತ್ವ, ಜಾತ್ಯಾತೀತ ಇವುಗಳು ನಮ್ಮ ಸಂವಿಧಾನದ ಪೀಠಿಕಾ ಭಾಗದಲ್ಲಿವೆ. ಅವುಗಳ ವಿಸ್ತಾರವಾದ ಅರ್ಥವನ್ನು ಅರ್ಥೈಯಿಸಿಕೊಂಡು ಅರಿತು ನಡೆದರೆ ಸಂವಿಧಾನಕ್ಕೆ ನಾವು ಕೊಡುವ ಮಹತ್ವ, ಮನ್ನಣೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್, ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಸಿ. ಹಿರೇಮಠ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಪ್ರೊ. ಪರಶುರಾಮ ಕೊಟ್ನಿಕಲ್ ಸ್ವಾಗತಿಸಿದರು, ಪ್ರೊ. ಸಂತೋಷ ನಾಗರಾಳ ವಂದಿಸಿದರು. ಪ್ರೊ. ಹೆಚ್. ಎಸ್. ದಳವಾಯಿ ಪ್ರತಿಜ್ಞಾ ವಿಧಿ ಬೋಧಿಸಿದರು ಮತ್ತು ಕಾರ್ಯಕ್ರಮವನ್ನು ಪ್ರೊ. ರಾಧಿಕಾ ಪಾಟೀಲ ನಿರೂಪಿಸಿದರು.