ಗದಗ:ಗದಗ ನಗರದ ಹೊರವಲಯದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಂಕಲ್ಪ ಗ್ರಾಮೀಣಾಭಿರುದ್ಧಿ ಸಂಸ್ಥೆ ಮತ್ತು ಎಸ್ ಬಿ ಐ ಬ್ಯಾಂಕ್ ಫೌಂಡೇಶನ್ ಸಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಸಸಿ ನೆಡುವ ಮೂಲಕ ಮಾನ್ಯ ಕುಲಪತಿಗಳಾದ ಪ್ರೊ.ಡಾ. ಸುರೇಶ್ ವಿ.ನಾಡಗೌಡರ ಮಾತನಾಡುವ ಮೊದಲು ಆರ್.ಸಿ.ಬಿ. ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದಿಂದ ಮಡಿದವರಿಗೆ ಒಂದು ನಿಮಿಷ ಮೌನಚರಣೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮಾತನಾಡಿದರು.
“ವಿಶ್ವವಿದ್ಯಾಲಯದಲ್ಲಿ ಈಗಾಗಲೇ ೫೦,೦೦೦ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಸಂರಕ್ಷಿಸಲಾಗಿದೆ. ಸಂಕಲ್ಪ ಗ್ರಾಮೀಣಾಭಿರುದ್ಧಿ ಸಂಸ್ಥೆ ಮತ್ತು ಎಸ್.ಬಿ.ಐ. ಫೌಂಡೇಶನ್ ಅವರು ನಮ್ಮ ವಿಶ್ವವಿದ್ಯಾಲಯದ ೧೪ ಎಕರೆ ಜಾಗದಲ್ಲಿ ೧೯೨೦೦ ಸಸಿ ನೆಟ್ಟು ಪರಿಸರ ರಕ್ಷಿಸುವ ಜವಾಬ್ದಾರಿಯಲ್ಲಿ ನಮ್ಮೊಟ್ಟಿಗೆ ಕೈಜೋಡಿಸಿರುವುದು ಬಹಳ ಸಂತಸದ ಸಂಗತಿಯಾಗಿದೆ. ಪ್ರತಿದಿನವೂ ಪರಿಸರ ದಿನವಾಗಬೇಕು; ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು; ಪರಿಸರವಿದ್ದರೆ ಗಿಡಮರಗಳಿದ್ದರೇನೆ ನಮಗೆ ಉಸಿರು ಎಂಬುದನ್ನು ಮನಗಾಣಬೇಕು. ಆರೋಗ್ಯದ ಗುಟ್ಟು ಅಡಗಿರುವುದು ಪರಿಸರದರಲ್ಲಿಯೇ ಎಂಬುದನ್ನರಿತು ಸದಾಕಾಲ ಪರಿಸರ ಸಂರಕ್ಷಣೆಯಲ್ಲಿ ನಮ್ಮ ತನವನ್ನು ತೋರಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಕಲ್ಪ ಗ್ರಾಮೀಣಾಭಿರುದ್ಧಿ ಸಂಸ್ಥೆ ಫೌಂಡೇಶನ್ ಸಿಇಒ ಶ್ರೀ. ಸಿಕಂದರ್ ಮೀರಾನಾಯಕ್ ವಿದ್ಯಾಲಯದ ಅಧಿಕಾರಿಗಳಾದ ಶ್ರೀ.ಮೃತ್ಯುಂಜಯ ಮೆಣಸಿನಕಾಯಿ ಅಧ್ಯಾಪಕರಾದ ಸುರೇಶ್ ಲಮಾಣಿ, ಚಂದ್ರಪ್ಪ ಬಾರಂಗಿ , ವೀರೇಶ್ ವಿಜಾಪುರ್, ನೀಲಮ್ಮ ಆರ್ ಕೆ, ನಾಗರತ್ನ ನಾಯಕ್, ಶಶಿಕಲಾ ಹಳ್ಳಿಕೇರಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿವರ್ಗದವರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.