ಹುಬ್ಬಳ್ಳಿ, ಏಪ್ರಿಲ್ 13 – ಶಾಂತಿಯ ಕಲೆಗಳಲ್ಲಿ ಮುಳುಗಿದ್ದ ಹುಬ್ಬಳ್ಳಿಯ ಒಂದು ಬಡಾವಣೆ ಇಂದು ತೀವ್ರ ಶೋಕ, ಕ್ರೋಧ ಮತ್ತು ಆತಂಕದಲ್ಲಿ ಮುಳುಗಿದೆ. ಐದು ವರ್ಷದ ಅಂಗವೈಕಲ್ಯ ಹೊಂದಿದ್ದ ಮುದ್ದಾದ ಬಾಲಕಿಯ ಮೇಲೆ ನಡೆದ ಮಾನವೀಯತೆಯನ್ನು ಮೀರುವ ಪೈಶಾಚಿಕ ಕೃತ್ಯ, ಸಮಗ್ರ ನಗರವನ್ನೇ ತಲ್ಲಣಗೊಳಿಸಿದೆ.
ಹೌದು, ಹುಬ್ಬಳ್ಳಿ ನಗರದ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನ ಕಲೆಹರಿಸುವ ಕ್ರೈಂ ಘಟನೆ ನಡೆದಿದೆ. ಐದು ವರ್ಷದ ಅಂಗವೈಕಲ್ಯ ಹೊಂದಿದ್ದ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಯತ್ನ ನಡೆಸಿದ ಬಳಿಕ ಕೊಲೆ ಮಾಡಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಬಿಹಾರ ಮೂಲದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಬಾಲಕಿ ಮನೆ ಹೊರಗಡೆ ಆಟವಾಡುತ್ತಿದ್ದ ಸಂದರ್ಭ, ಆರೋಪಿಯು ಆಕೆಯನ್ನು ಅಪಹರಿಸಿ ಹತ್ತಿರದ ಶೆಡ್‌ಗೆ ಕರೆದೊಯ್ದು, ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಮಗು ಗಟ್ಟಿಯಾಗಿ ಕಿರುಚಿದಳು. ಸಾರ್ವಜನಿಕರ ಆವಾಜು ಸಮೀಪಿಸುತ್ತಿರುವುದನ್ನು ಗಮನಿಸಿದ ಆರೋಪಿ, ಭಯದಿಂದ ಬಾಲಕಿಯ ಕತ್ತು ಹಿಸುಕಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೇಲಿನ ಪೋಸ್ಟ ಮೇಲೆ ಟಚ್ ಮಾಡಿದಲ್ಲಿ ಕಾಲೇಜ್ ನ ಸಂಪೂರ್ಣ ಮಾಹಿತಿ ಒದಗುತ್ತದೆ.
ಘಟನೆಯ ನಂತರ ಸ್ಥಳಕ್ಕೆ ಅಶೋಕನಗರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪೊಲೀಸರು IPC ಸೆಕ್ಷನ್ 302 (ಹತ್ಯೆ), 363 (ಅಪಹರಣೆ), 376 (ಅತ್ಯಾಚಾರ ಯತ್ನ) ಹಾಗೂ ಪೊಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಪರಾರಿಯಾಗಿರುವ ಆರೋಪಿ ಶೀಘ್ರದಲ್ಲೇ ಬಂಧನಕ್ಕೆ ಒಳಗಾಗಲಿದ್ದಾನೆ. ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಶಹರ ಹಾಗೂ ಹೊರವಲಯಗಳಲ್ಲಿ ಬಲೆ ಬೀಸಲಾಗಿದ್ದು, ಸಿಸಿಟಿವಿ ಫುಟೇಜ್‌ಗಳ ಪರಿಶೀಲನೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.
ಸ್ಥಳೀಯರೊಳಗೆ ಭಯ ಮತ್ತು ಆಕ್ರೋಶ ಉಂಟಾಗಿದ್ದು, ಮಗುವಿನ ಸಂಬಂಧಿಕರು ಹಾಗೂ ಸ್ಥಳಿಯರು ಅಶೋಕ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
