ಗದಗ: ನಗರದ 33ನೇ ವಾರ್ಡ್‌ನ ರಾಧಾಕೃಷ್ಣ ನಗರದ ಮಾರುತಿ ದೇವಸ್ಥಾನದಲ್ಲಿ “ಸಮಾನತೆಯ ರಥಯಾತ್ರೆ” ಹಾಗೂ “ಸಮಾನತೆಯ ಬುತ್ತಿ” ರಥಯಾತ್ರೆಗೆ ಶುಭಾರಂಭ ನೀಡಲಾಯಿತು. ಈ ಮಹತ್ವದ ಕಾರ್ಯಕ್ರಮದ ಉದ್ದೇಶ ಸಮಾನತೆ, ಐಕ್ಯತೆ ಮತ್ತು ಧಾರ್ಮಿಕ ಸಹಿಷ್ಣುತೆ ಎಂಬ ಮೌಲ್ಯಗಳನ್ನು ಎಲ್ಲ ಸಮುದಾಯಗಳ ನಡುವೆ ಹರಡುವುದು.
ಈ ಕಾರ್ಯಚಟುವಟಿಕೆಗೆ ಶ್ರೀ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಪೂಜೆಯ ಮೂಲಕ ಸಮಾನತೆಯ ರಥಯಾತ್ರೆಗೆ ಧಾರ್ಮಿಕ ರೀತಿಯ ಚಾಲನೆ ನೀಡಲಾಯಿತು. ಪೂಜಾ ವಿಧಿವಿಧಾನಗಳನ್ನು ಶ್ರದ್ಧಾ ಮತ್ತು ಶಿಸ್ತುಪೂರ್ವಕವಾಗಿ ನೆರವೇರಿಸಲಾಯಿತು.

ಮೇಲಿನ ಪೋಸ್ಟ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಕಾರ್ಯಕ್ರಮವನ್ನು ಮಾರುತಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಶ್ರೀ ನಾಲವಾಡ ಶೆಟ್ಟರ್ ಹಾಗೂ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಶ್ರೀ ಅನಿಲ್ ಪಿ. ಮೆಣಸಿನಕಾಯಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಹಾಗೂ ಸಮಿತಿಯ ಸದಸ್ಯರು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. ಉಪಸ್ಥಿತರಿದ್ದವರಲ್ಲಿ ಉಪಾವಾಸಿ ಸಣಿ ಕರಿ ನೀಲಣ್ಣವರ, ಸೋಮನಗೌಡ್ರು, ಮಾರುತಿ ಸರ್, ಸಂತೋಷ್ ನೀಲಣ್ಣವರು, ಪ್ರದೀಪ್ ಕುಮಾರ್, ರಾಜಾಪುರ ತಳವಾರ್, ಬಸಣ್ಣ ಗಾಣಿಗೇರ್, ಚಂದ್ರು ಬದಾಮಿ, ಸಂತೋಷ್ ಶಿವಾನಂದ ಮುಂತಾದವರು ಕಾರ್ಯಕ್ರಮದ ವೈಭವ ಹೆಚ್ಚಿಸಿದರು.

ಅಲ್ಲದೇ ಸಮಿತಿಯ ಸಂಚಾಲಕರಾದ ಸಿದ್ದಣ್ಣ ಪಲ್ಲೆದ, ರವಿಕಾಂತ್ ಅಂಗಡಿ, ವಸಂತ ಪಡಗದ, ಅಯ್ಯಪ್ಪ ಅಂಗಡಿ, ಬಸವಣ್ಣೆಯ್ಯ ಹಿರೇಮಠ, ಮೋಹನ್ ಮಂಜುನಾಥ್ ಮ್ಯಾಗೇರಿ, ರವಿ ಈಶಣ್ಣಾ, ಪಟ್ಟಣ ಶೆಟ್ಟರ, ಬಾಬು ಎಲಿಗಾರ, ಯೋಗೇಶ ಘೋಡಕೆ, ಗೋವಿಂದ ಗುತ್ತಿ, ಹಾಗೂ ರಾಧಾಕೃಷ್ಣ ನಗರದ ಹಲವಾರು ಯುವಕರು ಈ ಸಮಾನತೆ ರಥಯಾತ್ರೆಯಲ್ಲಿ ತಮ್ಮ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.

ಈ ರೀತಿಯ ಕಾರ್ಯಕ್ರಮಗಳು ಧರ್ಮ, ಸಂಸ್ಕೃತಿ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸ್ಥಳೀಯರು ಹಾಗೂ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.