ಹುಬ್ಬಳ್ಳಿ, ಎಪ್ರಿಲ್ 14: ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆಗೈದ ಆರೋಪಿಯನ್ನು ಬಂಧಿಸಲು ಹೋದಾಗ ಮಹಿಳಾ ಉಪಪೊಲೀಸ್ ನಿರೀಕ್ಷಕ (PSI) ನಡೆಸಿದ ಎನ್‌ಕೌಂಟರ್‌ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಹಾರ ಮೂಲದ ಆರೋಪಿತ ರಿತೇಶ್ ಎಂಬವನನ್ನು ಬಂಧಿಸಲು PSI ಅನ್ನಪೂರ್ಣಾ ಮುಕ್ಕಣ್ಣವರ ನೇತೃತ್ವದ ತಂಡ ಹೋದಾಗ, ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಎನ್ನಲಾಗಿದೆ. ಈ ವೇಳೆ ಲೇಡಿ PSI ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದರು. ಆದರೆ ಆರೋಪಿತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಿನ ಭಾಗಕ್ಕೆ ಗುಂಡು ಹಾರಿಸಿ ನಿಯಂತ್ರಿಸಲಾಯಿತು. ಗಾಯಗೊಂಡ ರಿತೇಶ್ ಅನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣಮಾಹಿತಿ ಒದಗುತ್ತದೆ.
ದಾಳಿಯಲ್ಲಿ ಓರ್ವ PSI ಹಾಗೂ ಇಬ್ಬರು ಸಿಬ್ಬಂದಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಎನ್‌ಕೌಂಟರ್‌ಗೆ ಸಾರ್ವಜನಿಕ ವಲಯದಿಂದ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ PSI ಅನ್ನಪೂರ್ಣಾ ಅವರ ಧೈರ್ಯ ಹಾಗೂ ಸಮಯೋಚಿತ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
